ಬೆಳ್ತಂಗಡಿ: ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಅಂಗಡಿ ಭಸ್ಮವಾಗಿರುವ ಘಟನೆ ಬೆಳ್ತಂಗಡಿ ನಗರದ ಹೇರಾಜೆ ಕಾಂಪ್ಲೆಕ್ಸ್ ನ ಕೆಎಎಫ್ ಕ್ರಿಯೇಟಿವ್ ಹೆಸರಿನ ಶಾಪ್ ನಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ.
ಶಾಪ್ ನಲ್ಲಿ ಹೀಲಿಯಂ ತುಂಬಿದ ಬಲೂನ್ ನಿಂದ ಗ್ಯಾಸ್ ಸೋರಿಕೆಯಾಗಿದೆ. ಶಾರ್ಟ್ ಸರ್ಕಿಟ್ ನಿಂದ ಹಿಡಿಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಶಾಪ್ ಒಳಗಡೆ ಇದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡಿದರು. ಸ್ಥಳೀಯರು ಕೂಡ ಬೆಂಕಿನಂದಿಸಲು ಸಹಾಯ ಮಾಡಿದರು. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಅಂಗಡಿ ಮಾಲೀಕಿಗೆ ಘಟನೆ ನೋಡಿ ಮೂರ್ಛೆ ಹೋಗಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

