ಮಂಗಳೂರು: ಕರಾವಳಿ ಮತ್ತು ಉಡುಪಿಯ ಕೆಲವು ಬಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ನಗರದಲ್ಲಿ ಸೋಮವಾರದಿಂದ ಮಳೆ ಆರಂಭವಾಗಿದ್ದು ಭಾರಿ ಮಳೆಯಿಂದಾಗಿ ಕೆಲವು ಭಾಗಗಳಿಗೆ ಹಾನಿಉಂಟಾಗಿದೆ. ನಗರದಲ್ಲಿ ಬೆಳಿಗ್ಗೆಯಿಂದ ಮಳೆ ಶುರುವಾಗಿದ್ದು ವಾಹನ ಚಾಲಕರು ಪರದಾಡುವಂತಾಗಿದೆ. ಪುತ್ತೂರು, ಕಡಬ, ಸುಬ್ರಮಣ್ಯ ಮತ್ತು ಬಂಟ್ವಾಳ ಕ್ಷೇತ್ರಗಳಲ್ಲಿ ಉತ್ತಮ ಮಳೆಯಾಗಿದೆ.
ತೀವ್ರವಾದ ಗಾಳಿ ಮತ್ತು ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಗಳು ಮತ್ತು ತಂತಿಗಳು ನಷ್ಟಗೊಂಡಿವೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ 151 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಹಾಗೂ 313 ಕಿ.ಮೀ ವಿದ್ಯುತ್ ತಂತಿಗಳು ಮತ್ತು 20 ಟ್ರಾನ್ಸ್ಫಾರಂಗಳು ಹಾಳಾಗಿವೆ. ಇದರಿಂದಾಗಿ 25.72 ಲಕ್ಷ ಮೆಸ್ಕಾಂ ನಷ್ಟಗಳಿಸಿದೆ.

