ಮಂಗಳೂರು: ಆರೋಗ್ಯ ಸಚಿವ ಯು‌.ಟಿ.ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದರು. ಜನರು ಆರೋಗ್ಯ ಕಾಪಾಡಲು ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯ ಇಲಾಖೆ ರೋಗ ಬಂದವರಿಗೆ ಮದ್ದು ಕೊಡಲಿದೆ. ಹೀಗಾಗಿ ಆರೋಗ್ಯ ಇಲಾಖೆ ಅನೇಕ ಯೋಜನೆಗಳನ್ನು ತಂದಿದೆ. ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ 200 ಎಂಬಿಬಿಎಸ್ ವೈದ್ಯರು ಬಂದಿದ್ದಾರೆ ಎಂದರು.

ಜೊತೆಗೆ ಮತ್ತೆ ಮೂರುವರೆ ಸಾವಿರ ಬೇರೆ ಸಿಬ್ಬಂದಿ ನೇಮಕಕ್ಕೆ ಒಪ್ಪಿಗೆ ಸಿಕ್ಕಿದೆ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಿದ್ದೇವೆ. ಮುಖ್ಯಮಂತ್ರಿ ಒಪ್ಪಿಗೆ ಪಡೆದು ಇಲಾಖೆ ಜೊತೆ ಚರ್ಚಿಸಿ ಅನುಷ್ಠಾನ ಬರಲಿದೆ. ಗ್ರಾಮೀಣ ಮಟ್ಟದಲ್ಲಿ 20 ನಿಮಿಷ, ನಗರದಲ್ಲಿ 15 ನಿಮಿಷಗಳಲ್ಲಿ ಅಂಬ್ಯುಲೆನ್ಸ್ ಬರಬೇಕು. ಜೊತೆಗೆ ರಾಜ್ಯದಲ್ಲಿ ನೂರು ಬೈಕ್ ಅಂಬ್ಯುಲೆನ್ಸ್ ಆರಂಭಿಸ್ತಾ ಇದೇವೆ.

108 ಗೆ 450 ಹೊಸ ಅಂಬ್ಯುಲೆನ್ಸ್ ಜೊತೆಗೆ ಒಟ್ಟು 750 ಅಂಬ್ಯುಲೆನ್ಸ್ ಸಿದ್ದಪಡಿಸುತ್ತೇವೆ, ಅಂಬ್ಯುಲೆನ್ಸ್ ತಡವಾಗಿ ಬಂದರೆ ನಿರ್ವಹಣೆ ಮಾಡೋ ಕಂಪೆನಿಗೆ ದಂಡ. ಎಲ್ಲಾ ಆಸ್ಪತ್ರೆಗಳು ಸೂಪರ್ ಸ್ಟೆಷಾಲಿಟಿ ಅಲ್ಲ, ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಆಯುಷ್ಮಾನ್ ಕರ್ನಾಟಕ ಯೋಜನೆ ಸುಧಾರಿಸಲು ಕ್ರಮ ಕೈಗೊಳ್ಳಲಾಗಿದೆ.

ಮುಂದಿನ ದಿನಗಳಲ್ಲಿ ಈ ಯೋಜನೆ ಎಪಿಎಲ್ ಗೂ ವಿಸ್ತರಿಸಲು ಚರ್ಚೆ ನಡೆಯುತ್ತಿದೆ. ನಿವೃತ್ತ ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸಂಧ್ಯಾ ಕಿರಣ ಯೋಜನೆ ರೂಪಿಸಲಾಗಿದೆ. 1.25 ಶೇ. ಅವರ ಪಿಂಚಣಿ ಹಣದಲ್ಲಿ ಕಟ್ಟಬೇಕು, ಅದರಲ್ಲಿ ಅವರಿಗೆ ಈ ಯೋಜನೆ ಜಾರಿಯಾಗಲಿದೆ. ಕೇಂದ್ರ ಸರ್ಕಾರದ ವಯೋ ವಂದನಾ ಯೋಜನೆಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸಿಎಂ ಪ್ರಧಾನಿಗೆ ಪತ್ರ ಬರೀತಾರೆ, ನಾನು ಕೇಂದ್ರ ಆರೋಗ್ಯ ಸಚಿವರಿಗೆ ಬರೀತಿನಿ ಎಂದರು.

ನಮ್ಮ ಸರ್ಕಾರ ಈ ಯೋಜನೆಗೆ ಸಹಕಾರ ನೀಡಲು ಸಿದ್ದವಿದೆ. ನಮ್ಮ ರಾಜ್ಯದ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮಾಡಲಾದ ಯೋಜನೆಗಳು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳೂ ತಯಾರಿದೆ, ಬೆಲೆಗಳ ಬದಲಾವಣೆ ಮಾಡ್ತಾ ಇದೀವಿ. ಮುಖ್ಯಮಂತ್ರಿಗಳ ಸೂಚನೆಯಂತೆ ದ‌‌.ಕ ಜಿಲ್ಲೆಯ ಪ್ರಕೃತಿ ವಿಕೋಪ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಕಡಬ ಹೋಗಿದ್ದೇನೆ. ಕೆಲವೊಂದು ಕಡೆ ಪರಿಹಾರ ವಿತರಣೆಯಲ್ಲಿ ಗೊಂದಲ ಆಗಿದೆ. ಅಧಿಕಾರಿಗಳು ಬುದ್ದಿವಂತಿಕೆ ಜೊತೆಗೆ ಹೃದಯವಂತಿಕೆ ಕೆಲಸ ಮಾಡಲಿ ಎಂದರು.