ಮಂಗಳೂರು : ಕೆಎಸ್ಸಾರ್ಟಿಸಿಯ ಮಂಗಳೂರು ವಿಭಾಗದ ವತಿಯಿಂದ ಸೆ. 22ರಂದು ಆರಂಭವಾಗಿರುವ ದಸರಾ ವಿಶೇಷ ಪ್ಯಾಕೇಜ್ ಪ್ರವಾಸಕ್ಕೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಅ.2ರ ವರೆಗೆ ಕಾರ್ಯಾಚರಿಸಲು ಉದ್ದೇಶಿಸಿದ್ದ ಮಂಗಳೂರು – ಮಡಿಕೇರಿ, ಮಂಗಳೂರು – ಸಿಗಂದೂರು ಹಾಗೂ ಮಂಗಳೂರು -ಕೊಲ್ಲೂರು ಪ್ಯಾಕೇಜ್ ಪ್ರವಾಸವನ್ನು ಅ. 7ರ ವರೆಗೆ ವಿಸ್ತರಿಸಲಾಗಿದೆ.
ಸೆ. 22ರಿಂದ 29ರ ವರೆಗೆ ಸಿಗಂದೂರು, ಕೊಲ್ಲೂರು, ಕಟೀಲು, ಮಡಿಕೇರಿ, ಉಡುಪಿ- ಕೊಲ್ಲೂರು, ಉಡುಪಿ- ಶೃಂಗೇರಿಗೆ ಒಟ್ಟು 112 ಬಸ್ಸುಗಳಲ್ಲಿ 4,533 ಪ್ರಯಾಣಿಕರು/ಪ್ರವಾಸಿಗರು ಪ್ರಯಾಣ ಮಾಡಿದ್ದಾರೆ.
ಎಂಟು ದಿನಗಳಲ್ಲಿ ಒಟ್ಟು 27, 56,793 ರೂ. ಆದಾಯ ಸಂಗ್ರಹವಾಗಿದೆ ಎಂದು ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

