ಮಂಗಳೂರು: ಹೃದಯಾಘಾತದಿಂದ ಸರ್ಕಾರಿ ನೌಕರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಹಾಸನ ಮೂಲದ ಸತೀಶ್ (46) ಸಾವನ್ನಪ್ಪಿದ ವ್ಯಕ್ತಿ,
ಲಾಯಿಲದ ಬಾಡಿಗೆ ಮನೆಯಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. ಸ್ನಾನ ಮಾಡಿ ಬರುವಾಗ ಸತೀಶ್ ಕುಸಿದು ಬಿದ್ದಿದ್ದಾರೆ. ಸತೀಶ್ ಪತ್ನಿ ಜಯಶ್ರೀ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಗೆ ಹೋದಾಗ ಮೃತಪಟ್ಟಿರೋದಾಗಿ ವೈದ್ಯರು ಹೇಳಿದ್ದಾರೆ. ಸತೀಶ್ ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಪ್ರಥಮ ದರ್ಜೆ ಸಹಾಯಕ ನೌಕರರಾಗಿ ಕೆಲಸ ಮಾಡುತ್ತಿದ್ದರು.

