ಮಂಗಳೂರು:  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಶೇಷಚೈತನ್ಯ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸುತ್ತಿದ್ದ ವ್ಯಕ್ತಿ ಹಾಗೂ ಸಂತ್ರಸ್ತ ಬಾಲಕಿಯ ಮೇಲೆ ಹಲ್ಲೆಗೆ ಸಹಕರಿಸಿದ ಮಹಿಳೆಯ ವಿರುದ್ಧ ದೂರು ದಾಖಲಾಗಿತ್ತು . ಮುಂಬೈನಲ್ಲಿ ನೆಲೆಸಿರುವ ಬಿಹಾರ ಮೂಲದ ಅಬ್ದುಲ್ ಹಲೀಂ(37) ಮತ್ತು ಕುಲಶೇಖರ ನಿವಾಸಿ ಶಮೀನಾ ಬಾನು(22) ಆರೋಪಿಗಳಾದಗಿದ್ದರು

ದೂರುದಾರ ಮಹಿಳೆಯ ಕಿರಿಯ ಸಹೋದರ ಮನ್ಸೂರ್ ಅಹಮದ್ ಬಾಬಾ ಶೇಖಾ ಮತ್ತು ಆರೋಪಿ ಅಬ್ದುಲ್ ಹಲೀಂ ಸ್ನೇಹಿತರಾಗಿದ್ದು, ಆಗಸ್ಟ್ 10 ರಂದು ಕಾಸರಗೋಡಿನಿಂದ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ಆಗ ಅವರ ಬೈಕ್ ಹೊಸಂಗಡಿಯಲ್ಲಿ ಅಪಘಾತಕ್ಕೀಡಾಗಿದ್ದು, ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರೂ ಆಸ್ಪತ್ರೆಯ ಒಂದೇ ಕೋಣೆಯಲ್ಲಿದ್ದರು, ಅವರ ನಡುವೆ ಒಂದು ಪರದೆ ಇತ್ತು.

ಅಪಘಾತದ ಬಗ್ಗೆ ವಿಚಾರಿಸಲು ದೂರುದಾರ ಮಹಿಳೆ ಮತ್ತು ಅವರ ಹಿರಿಯ ಮಗಳು ಮಂಜೇಶ್ವರ ಠಾಣೆಗೆತೆರಳಿದ್ದರು. ಈ ಸಂದರ್ಭದಲ್ಲಿ ತನ್ನ ಕಿರಿಯ ಸಹೋದರನ ಪತ್ನಿ ಶಮೀನಾ ಬಾನು ಎಂಬಾಕೆಯೊಂದಿಗೆ ವಿಶೇಷ ಚೈತನ್ಯ ಕಿರಿಯ ಮಗಳನ್ನು ಆಸ್ಪತ್ರೆ ಯಲ್ಲಿ ಬಿಟ್ಟು ಹೋಗಿದ್ದಾಳೆ.

ಆರೋಪಿಗಳಾದ ಶಮೀನಾ ಬಾನು ಆಸ್ಪತ್ರೆಯಲ್ಲಿ  ಅಬ್ದುಲ್ ಹಲೀಂ ಜೊತೆ ಅನೈತಿಕವಾಗಿ ವರ್ತಿಸುತ್ತಿರುವುದನ್ನು ಅಪ್ರಾಪ್ತ ದಿವ್ಯಾಂಗ ಬಾಲಕಿ ನೋಡಿದ್ದಾಳೆ. ನಂತರ ಶಮೀನಾ ವಿಕಲಚೇತನ ಬಾಲಕಿಯನ್ನು ಆರೋಪಿ ಅಬ್ದುಲ್ ಹಲೀಂನ ಹಾಸಿಗೆಯ ಮೇಲೆ ಕೂರಿಸಿದ್ದಳು. ಸಂತ್ರಸ್ತ ಬಾಲಕಿಯನ್ನು ಹಾಸಿಗೆಯ ಮೇಲೆಕೂರಿಸಿದ ಹುಡುಗಿಗೆ ಆರೋಪಿ ಶಮೀನಾ ಸಹಾಯದಿಂದ ಅಬ್ದುಲ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು

ಈ ಸಂಬಂಧ ಸಂತ್ರಸ್ತ ಬಾಲಕಿಯ ತಾಯಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .ತಾ. 16.08.2023 ರಂದು ಮಂಗಳೂರಿನ ಮಹಿಳಾ ರಾಣೆ ಯಲ್ಲಿ ಧಾಖಲಾದ ಅಪರಾಧ ಸಂಖ್ಯೆ 71.2023 ಕೆಸನ್ನು ಸ್ಪೆಷಲ್ ಕೇಸ್ ನಂ 183.2023ರ. ರಂ ತೆ ವಿಚಾರಣೆ ನಡೆಸಿದ ಮಾನ್ಯ ಎರಡನೇ ಹೆಚ್ಚುವರಿ ಜಿಲ್ಲಾ ವಿಶೇಷ ಸತ್ರ ನ್ಯಾಯಾಲ (FTSC2) ದ ನ್ಯಾಯಾದೀಶರಾದ ಶ್ರೀ. ಮಾನು ಕೆ. ಎಸ್ ರವರು ತಾ. 26.07.2024ರಂದು ಆರೋಪಿಗಳನ್ನು ನಿರಪರಾಧಿ ಗಳೆಂದು ಖುಲಾಸೆ ಗೊಳಿಸಿ ಆದೇಶ ನೀಡಿರುತ್ತಾರೆ.
ಒಂದನೇ ಆರೋಪಿತರ ಪರವಾಗಿ ಮಂಗಳೂರಿನ ಯುವ ವಕೀಲರಾದ ಶ್ರೀ ಜಗದೀಶ್ ಕೆ. ಆರ್., ಪ್ರಸಾದ, ಹೇಮಂತ್, ಪ್ರಜ್ಞಾ ಹಾಗೂ 2ನೇ ಆರೋಪಿ ರ ಪರವಾಗಿ ಶ್ರೀ. ಬಿ ವಿವೇಕ್ ಮುಲ್ಕಿ, ಕೃಷ್ಣ ಕಾರಾಂತ್, ಚೇತನಾ ಕೆ, ಮತ್ತು ಅಲೇಕ್ಯ ಕೆ ವಾದ ಮಂಡಿಸಿದ್ದರು