ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದೀಪಾವಳಿಯ ಪ್ರಯುಕ್ತ ತುಪ್ಪದ ದೀಪೋತ್ಸವದ ಸಂಭ್ರಮ ನಡೆಯಿತು.

ಈ ದೀಪೋತ್ಸವ ಪೊಳಲಿ ದೇವಸ್ಥಾನದಲ್ಲಿ 3 ದಿನಗಳ ಕಾಲ ಸಂಜೆ ೭ಘಂಟೆಗೇ ನಡೆಯಲಿದ್ದು ಪೊಳಲಿ ಟೈಗರ್ಸ್ ಪೊಳಲಿ ಅಪ್ಪೆನ ಮೋಕೆದ ಬೊಳ್ಳಿಲ್ಲು ತಂಡದ ೬ನೆ ವರ್ಷದ ಕೊಡುಗೆಯಾಗಿದೆ. ನಿನ್ನೆ ಸಂಜೆ ಇದಕ್ಕೆ ಚಾಲನೆ ನೀಡಲಾಯಿತು.

ನಂದನ್ ಮಲ್ಯ , ಅವಿನಾಶ್ ಸುವರ್ಣ , ವೆಂಕಟೇಶ್ ನಾವಡ ,ಸಂತೋಷ್ ಪೊಳಲಿ , ಮಂಜಯ್ಯ ಶೆಟ್ಟಿ , ಚರಣ್ ಭಂಡಾರಿ , ಸುಕೇಶ್ ಚೌಟ , ಸಹಿತ ಮತ್ತಿತರರು ದೀಪ ಬೆಳಗಿಸಿ ಚಾಲನೆ ನೀಡಿದರು . ಬಿಜೆಪಿ ಯುವ ಮೋರ್ಚಾ ಮುಖಂಡರ ನಂದನ್ ಮಲ್ಯ , ಅವಿನಾಶ್ ಸುವರ್ಣ ಈ ಸಂದರ್ಭದಲ್ಲಿ ಶುಭಹರಿಸಿದರು , ಬಳಿಕ ಕಾಜಿಲ  ತಂಡದಿಂದ ದೇವಸ್ಥಾನದ ಆವರಣದಲ್ಲಿ ಕುಣಿತ ಭಜನೆ ನಡೆಯಿತು.