ಮಂಗಳೂರು: ವಿಶ್ವದಾದ್ಯಂತ ಮಾರ್ಚ್ 3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ “ಮನಸ್ಥಿತಿಗಳನ್ನು ಬದಲಾಯಿಸುವುದು: ನಿಮ್ಮನ್ನು ನೀವು ಸಬಲಗೊಳಿಸುವುದು”. ಈ ದಿನದಂದು ಕಿವುಡುತನದಿಂದ ಪಾರಾಗುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಪ್ರಯುಕ್ತ ಅತ್ತಾವರದ ಕೆಎಂಸಿ ಆಸ್ಪತ್ರೆಯ ವಾಕ್ ಮತ್ತು ಶ್ರವಣಶಾಸ್ತ್ರ ವಿಭಾಗವು ಮಾರ್ಚ್ 1 ಮತ್ತು ಮಾರ್ಚ್ 3, 2025 ರಂದು ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ ಉಚಿತ ಶ್ರವಣ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದೆ. ಈ ಶಿಬಿರವು ಆಸ್ಪತ್ರೆಯ ಶ್ರವಣಶಾಸ್ತ್ರ ವಿಭಾಗದಲ್ಲಿ ನಡೆಯಲಿದ್ದು, ಶ್ರವಣದೋಷವನ್ನು ಅನುಭವಿಸುತ್ತಿರುವವರು ಸೇರಿದಂತೆ ಎಲ್ಲಾ ವಯಸ್ಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ತಮ್ಮ ಶ್ರವಣ ತಪಾಸಣೆ ಮಾಡಿಕೊಳ್ಳಲು ಈ ಅಮೂಲ್ಯ ಅವಕಾಶವನ್ನು ಬಳಸಿಕೊಳ್ಳುವಂತೆ ಆಸ್ಪತ್ರೆಯ ಪ್ರಕಟಣೆಯು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ: 70220 78002