ಮಂಗಳೂರು : ನ್ಯೂ ಇಂಡಿಯಾ ಲಕ್ಕೀ ಸ್ಕೀಮ್ ಹೆಸರಲ್ಲಿ ವಂಚನೆಗೊಳಗಾದ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ನೂರಾರು ಕೋಟಿ ವಂಚಿಸಿದ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ, ನಗರದಲ್ಲಿ ಕಾರ್ಯಾಚರಿಸುತ್ತಿರುವ ಬ್ಲೇಡ್ ಕಂಪೆನಿಗಳಿಂದ ಜನರನ್ನು ರಕ್ಷಿಸಲು ಒತ್ತಾಯಿಸಿ, ಮೋಸದ ಜಾಲವಾದ ಲಕ್ಕಿ ಸ್ಕೀಮ್ ಉದ್ಯಮವನ್ನು ಮುಚ್ಚಲು ಆಗ್ರಹಿಸಿದರು.

ವಂಚನೆಗೊಳಗಾದ ಸಂತ್ರಸ್ತರಿಂದ ಮಿನಿ ವಿಧಾನ ಸೌಧ ಕ್ಲಾಕ್ ಟವರ್ ಬಳಿ, ಮಂಗಳೂರು ಪ್ರತಿಭಟನಾ ಪ್ರದರ್ಶನ ನಡೆಯಿತು. ಪ್ರತಿಭಟನೆಯಲ್ಲಿ ನ್ಯೂ ಇಂಡಿಯಾ ಲಕ್ಕೀ ಸ್ಕೀಮ್ ಹೆಸರಲ್ಲಿ ವಂಚನೆಗೊಳಗಾದ ಸಂತ್ರಸ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.