ಮಂಗಳೂರು: ಸರಕಾರ ಅಭಿವೃದ್ಧಿಯನ್ನು ಕಡೆಗಣಿಸಿದೆ. ಯಡಿಯೂರಪ್ಪ -ಬೊಮ್ಮಾಯಿ ಸರಕಾರವಿದ್ದಾಗ ಅತೀ ಹೆಚ್ಚು ಅನುದಾನ ನೀಡಲಾಗಿತ್ತು. ಅಭಿವೃದ್ಧಿ ಅನ್ನೋದು ಈ ಸರಕಾರದಲ್ಲಿ ಕನಸಿನ ಮಾತಾಗಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ನಳಿನ್ ಹೇಳಿಕೆ ನೀಡಿದರು.

ದಕ್ಷಿಣ ಕನ್ನಡದ ಹಾಲಿನ ಡೈರಿಗಳು ಲಾಸ್ ನಲ್ಲಿವೆ. ನಮ್ಮ ವಿರುದ್ಧ 40% ಭ್ರಷ್ಟಾಚಾರದ ಆರೋಪ ಮಾಡಿದರು. ಈಗ 80% ಸರಕಾರವಾಗಿದೆ ಇದು ಕಳ್ಳರ ಸರಕಾರ, ಭ್ರಷ್ಟಚಾರಿಗಳ ಸರಕಾರ.. ಪ್ರಜಾಪ್ರಭುತ್ವ ಸಂವಿಧಾನದ ಹೆಸರಲ್ಲಿ ಮಾತನಾಡುವ ಮುಖ್ಯಮಂತ್ರಿಗಳು ನೈತಿಕತೆಯಿಂದ ರಾಜೀನಾಮೆ ನೀಡಬೇಕು ಎಂದರು.

ಸಿದ್ದರಾಮಯ್ಯ ದಸರಾದಲ್ಲಿ ತನ್ನ ಹೆಗ್ಗಳಿಕೆ, ಭ್ರಷ್ಟಾಚಾರದ ಆರೋಪ, ರಾಜಕೀಯದ ಬಗ್ಗೆ ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ನೀಡಬೇಕು. ಈ ಸರಕಾರದಡಿ ಹಲ್ಲೆ ಗಲಭೆ ಹಿಂದೂ ಮುಸ್ಲಿಂ ಗಲಾಟೆಗಳು ನಡೆಯುತ್ತಿದೆ. ಪಾಕಿಸ್ತಾನ ಪರ ಘೋಷಣೆ ಹಾಕಿದವರ ಬಂಧನವಾಗಿಲ್ಲ. ಹಿಂದೂ ಸಮಾಜ ಮೇಲೆ ದಾಳಿ ಯಾಗುವ ಕೆಲಸವಾಗುತ್ತಿದೆ ಇದನ್ನ ಹತ್ತಿಕ್ಕುವ ಕೆಲಸಗಳು ಆಗುತ್ತಿಲ್ಲ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.