ಮಂಗಳೂರು: ಕೆ.ಸಿ ವೇಣುಗೋಪಾಲ್ ಗೆ ಹೈಕಮಾಂಡ್ ಏಜೆಂಟ್ ಎಂದು ಆರ್.ಅಶೋಕ್ ಲೇವಡಿ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಆರ್ ಅಶೋಕ್ ವಿರುದ್ಧ ಮಾಜಿ ಸಚಿವ ರಮಾನಾಥ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್. ಅಶೋಕ್ ಮಂಗಳೂರಿನ ಸರಕಾರಿ ಜಾಗವನ್ನ ಖಾಸಗಿಯವರಿಗೆ ಮಾರಿದ ವ್ಯಕ್ತಿ. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದವರಿಗೆ ಹೇಳುವ ನೈತಿಕತೆ ಅಶೋಕ್ ಅವರಿಗೆ ಇಲ್ಲ. ಆರ್ ಅಶೋಕ ಸರಕಾರಿ ಭೂಮಿ ಮಾರಾಟ ಮಾಡಿದ ಪ್ರಕರಣ ಮುನ್ನಲೆಗೆ ಬಂದು ತನಿಖೆಯಾಗಬೇಕು. ಕಾಂಗ್ರೆಸ್ ಬಗ್ಗೆ ಮಾತನಾಡಲು ಇವರಿಗೆ ನೈತಿಕತೆ ಇಲ್ಲ. ಭ್ರಷ್ಟಚಾರ ಮಾಡಿದ ಅವನು ಯಾರು ನಮ್ಮ ಬಗ್ಗೆ ಮಾತನಾಡಲು ಎಂದರು.