ಮಂಗಳೂರು : ಜಂತರ್ ಮಂತರ್ ಪ್ರತಿಭಟನೆಗೆ ವಿದೇಶಿ ಫಂಡ್ ಬಂದಿರೋ ಆರೋಪಕ್ಕೆ ಎಂಜಿ ಹೆಗ್ಡೆ ಹೇಳಿಕೆ ನೀಡಿದ್ದಾರೆ. ಫಂಡ್ ಬರೋವರೆಗೂ ಅಮಿತ್ ಶಾ , ಜೇಮ್ಸ್ ಬಾಂಡ್ ಅಜಿತ್ ದೊಯಲ್ ಕಡ್ಲೆ ಕಾಯಿ ತಿನ್ನುತಾ ಇದ್ರ, ಇವರ ಇಂಟೆಲಿಜೆನ್ಸ್ ಏಜನ್ಸಿ ಕತ್ತೆಯನ್ನ ಕಾಯುತ ಇದ್ರ, ವಿದೇಶಿ ಫಂಡ್ ಆರ್‌ ಎಸ್‌ ಎಸ್‌ ಗೆ ಬರುತಾ ಇದೆ ಎಂದರು.

20 ರಿಂದ 30 ದೇಶಗಳಲ್ಲಿಆರ್‌ ಎಸ್‌ ಎಸ್‌ ಪಥಸಂಚಲನ ಮಾಡಿದೆ. 40 ದೇಶಗಳಲ್ಲಿ ಆರ್‌ ಎಸ್‌ ಎಸ್‌ ಸಂಘಟನೆ ರಿಜಿಸ್ಟ್ರೆಷನ್‌ ಮಾಡಿದೆ. ವಿದೇಶದಿಂದ ಒಂದೇ ಒಂದು ಫಂಡ್ ಆರ್‌ ಎಸ್‌ ಎಸ್‌ ಗೆ ಬಂದಿಲ್ಲ ಎಂದು ಹೇಳಲಿ ನೋಡೋಣ ಎಂದು ಎಂಜಿ ಹೆಗ್ಡೆ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.