ಮಂಗಳೂರು: ನಗರ ಕಮಿಷನರೆಟ್ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕುಂಟಿಕಾನ ಜಂಕ್ಷನ್ ಬಳಿ ಕುದ್ರೋಳಿ ಅಳಕೆ ನಿವಾಸಿ ವಿಶಾಲ್ (21), ಪದವಿನಂಗಡಿ ಕೊಂಚಾಡಿಯ ಪ್ರತೀಕ್ (20), ಇನ್ನೊಂದು ಪ್ರಕರಣದಲ್ಲಿ ಕೋಟೆಕಾರು ಗ್ರಾಮದ ಮಾಡೂರು ಬಳಿಯ ಸಾರ್ವಜನಿಕ ಪ್ರದೇಶದಲ್ಲಿ ಅಬ್ದುಲ್ ರಶೀದ್, ಮಹಮ್ಮದ್ ಸೌರೂಫ್, ಅಬ್ದುಲ್ ಶಾಕೀರ್ ಬಂಧಿತರು.

