ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆಯಾಗಿರುವ ಘಟನೆ ಮಂಗಳೂರಿನ ಅಳಿವೆಬಾಗಿನಲ್ಲಿ ನಡೆದಿದೆ.
ಅಯಾನ್ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಇಬ್ರಾಹಿಂ ಖಲೀಲ್ ಎಂಬವರಿಗೆ ಸೇರಿದ ಬೋಟ್ ಇದಾಗಿದೆ. ಆಳ ಸಮುದ್ರ ಮೀನುಗಾರಿಕೆಗೆ ಪರ್ಸಿನ್ ಬೋಟ್ ತೆರಳಿದ್ದವು. ಮೀನುಗಾರಿಕೆ ಮುಗಿಸಿ ಮುಳುತ್ತಿದ್ದಾಗ ಅಳಿವೆ ಬಾಗಿಲಿನಲ್ಲಿ ದುರಂತ ನಡೆದಿದೆ.
ಬೋಟ್ ನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಅಳಿವೆ ಬಾಗಿನಲ್ಲಿ ಬೋಟ್ ನ ತಳಭಾಗ ಕಲ್ಲಿಗೆ ಬಡಿದು ಜಖಂ ಆಗಿದೆ. ಬೋಟ್ ಒಳಗೆ ನೀರು ನುಗ್ಗಿದೆ. ಅಪಾಯಕ್ಕೆ ಸಿಲುಕಿದ ಮೀನುಗಾರರನ್ನು ಇತರ ಬೋಟ್ ನ ಮೀನುಗಾರರು ರಕ್ಷಿಸಿದರು. ಅಳಿವೆ ಬಾಗಿಲಿನಲ್ಲಿ ಮೀನುಗಾರಿಕಾ ಬೋಟ್ ಮುಳುಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

