ಮಂಗಳೂರು: ಚಿನ್ನಾಭರಣದ ವ್ಯಾಪಾರದಲ್ಲಿ ತನ್ನದೇ ಛಾಪು ಮೂಡಿಸಿ ಕಳೆದ 40 ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಬಿಂದು ಜ್ಯುವೆಲರಿಯ ಮಂಗಳೂರು ಶಾಖೆಯ ಮೊದಲ ವರ್ಷದ ಸಂಭ್ರಮಾಚರಣೆ ಸೋಮವಾರ ನಗರದ ಬೆಂದೂರಿನಲ್ಲಿರುವ ಬಿಂದು ಜ್ಯುವೆಲರಿಯ ಆಚರಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಆಭರಣ ಮಳಿಗೆಗಳು ಗ್ರಾಹಕರ ವಿಶ್ವಾಸ ಗಳಿಸುವುದು ಮುಖ್ಯ. ಮಂಗಳೂರಿನಲ್ಲಿ ವರ್ಷದ ಹಿಂದೆ ಆರಂಭವಾಗಿರುವ ಬಿಂದು ಜುವೆಲರಿ ತನ್ನ ಅತ್ಯುತ್ತಮ ಹಾಗೂ ಗುಣಮಟ್ಟದ ಸೇವೆಯ ಮೂಲಕ ಕರಾವಳಿಯ ಜನರ ವಿಶ್ವಾಸ ಗಳಿಸಿದೆ. ಮಂಗಳೂರಿನಲ್ಲಿ ಒಂದು ವರ್ಷ ಪೂರೈಸಿದ ಸಂಸ್ಥೆಯು ಮುಂದಿನ ದಿನಗಳಲ್ಲಿ ದೇಶ ವಿದೇಶಗಳಲ್ಲಿ ಮಳಿಗೆಗಳನ್ನು ಆರಂಭಿಸಿ ಹೆಮ್ಮರವಾಗಿ ಬೆಳೆಯಲಿ ಎಂದರು.
ಚಿತ್ರ ನಟಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ರೂಪಶ್ರೀ ವರ್ಕಾಡಿ ಮಾತನಾಡಿ, ಬಿಂದು ಜುವೆಲರಿ ಕೇವಲ ಚಿನ್ನಾಭರಣದ ವ್ಯಾಪಾರಕ್ಕೆ ಮಾತ್ರವೇ ಸೀಮಿತವಾಗದೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ವಿಚಾರ. ನನಗೆ ಸಿಕ್ಕಿರುವ ರಾಷ್ಟ್ರ ಪ್ರಶಸ್ತಿಗೆ ಶೇ. 75ರಷ್ಟು ನನ್ನನ್ನು ಪ್ರೀತಿಸುವ ಜನರ ಆಶೀರ್ವಾದ ಕಾರಣವಾಗಿದ್ದು, ಅವರಿಗೆ ಈ ಗೌರವ ಅರ್ಪಿಸುತ್ತೇನೆ ಎಂದರು.
ಮಂಗಳೂರು ಪಾಲಿಕೆಯ ಮಾಜಿ ಸದಸ್ಯ ನವೀನ್ ಡಿಸೋಜ, ಕಟ್ಟಡದ ಮಾಲಕ ಲುವಿ ಜೆ. ಪಿಂಟೊ, ಹೃದಯ ತಜ್ಞ ಡಾ| ನರಸಿಂಹ ಪೈ, ಉದ್ಯಮಿ ಕರುಣಾಕರ್ ಎಂ. ಎಚ್., ಶಿಕ್ಷಕ ರಾಜೇಶ್ ಮಾಸ್ಟರ್, ಕೈಗಾರಿಕೋದ್ಯಮಿ ಮಧುಸುಧಾನ್ ಐಯರ್, ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸ್ವರೂಪ ಎಂ. ಶೆಟ್ಟಿ, ಬಿಜೆಪಿ ಮುಖಂಡ ಮುರಳಿ ಹೊಸಮಜಲು, ವಿಧುಷಿ ಶಿನೋಜ್, ಮುಖಂಡರಾದ ಗೋಪಾಲ ಕೃಷ್ಣ ಶೆಟ್ಟಿ, ಮೋಹನ್ ಮತ್ತಿತರ ಗಣ್ಯರು ಶುಭ ಹಾರೈಸಿದರು. ರಶ್ಮಿ ರಾಜ ನಿರೂಪಿಸಿದರು.
ಸಮಾರಂಭದಲ್ಲಿ 25 ಮಂದಿ ಗ್ರಾಹಕರನ್ನು ಸಮ್ಮಾನಿಸಲಾಯಿತು. ಲಕ್ಕಿಡ್ರಾ ವಿಜೇತರಾದ ಸವಿತಾ ಅವರಿಗೆ 8 ಗ್ರಾಂ ಚಿನ್ನ ಹಾಗೂ ಪ್ರತಿಭಾ ಅವರಿಗೆ ವಜ್ರದ ಉಂಗುರ ವಿತರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಭಿಲಾಶ್ ಕೆ.ವಿ. ಅವರು ಮಾತನಾಡಿ, ಕಾಸರಗೋಡಿನಲ್ಲಿ ಹಲವು ವರ್ಷ ಚಿನ್ನಾಭರಣ ವ್ಯಾಪಾರ ಮಾಡಿ ಮಂಗಳೂರಿನಲ್ಲಿ ಮಳಿಗೆ ಆರಂಭಿಸುವ ವೇಳೆ ಹಲವಾರು ಸವಾಲುಗಳಿದ್ದವು. ಆದರೆ, ಒಂದೇ ವರ್ಷದಲ್ಲಿ ಹಲವಾರು ಗ್ರಾಹಕರ ವಿಶ್ವಾಸ ಗಳಿಸಿದ್ದೇವೆ. ಮೂಲಕ ಸಂಸ್ಥೆಯ ಮೇಲೆ ಗ್ರಾಹಕರು ಇರಿಸಿರುವ ನಂಬಿಕೆಯನ್ನು ಗುಣಮಟ್ಟದ ಸೇವೆಯ ಮೂಲಕ ಉಳಿಸಲಾಗುವುದು. ಮುಂದಿನ ದಿನಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ಸಿಎಸ್ ಆರ್ ನಿಧಿಯಡಿ ವಿವಿಧ ಕಾರ್ಯಗಳನ್ನು ಆರಂಭಿಸಲಾಗುವುದು ಎಂದರು. ಸಂಸ್ಥೆಯ ನಿರ್ದೇಶಕರ ಡಾ| ಅಜಿತೇಶ್ ಕೆ.ವಿ. ಮಾತನಾಡಿ, ಮಂಗಳೂರಿನಲ್ಲಿ ಜುವೆಲರಿ ಆರಂಭಿಸಿದ ಬಳಿಕ ಇಲ್ಲಿನ ಅನೇಕ ಜನ ನಮಗೆ ಬೆಂಬಲ ನೀಡಿದ್ದಾರೆ. ಅವರ ಸಹಕಾರದಿಂದ ಉದ್ಯಮ ಬೆಳೆಯಲು ಸಾಧ್ಯವಾಗಿದೆ ಎಂದರು.
ಬಿಂದು ಜುವೆಲರಿ ತನ್ನ ಮೊದಲ ವರ್ಷಾಚರಣೆ ಸಂದರ್ಭ ‘ನಮ್ಮ ಮಂಗಳೂರು ಶೃಂಗಾರ’ ಅಭಿಯಾನ ಹಮ್ಮಿಕೊಂಡಿದ್ದು, ಗ್ರಾಹಕರಿಗಾಗಿ ಲಕ್ಕಿ ಡ್ರಾ ಹಾಗೂ ಹಲವು ಕೊಡುಗೆಗಳನ್ನು ಘೋಷಿಸಿದೆ. ಲಕ್ಕಿ ಡ್ರಾದಲ್ಲಿ ಪ್ರಥಮ ಬಹುಮಾನವಾಗಿ 1 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೆಸ್, ದ್ವಿತೀಯ ಬಹುಮಾನ 50,000 ರೂ. ಮೌಲ್ಯದ ವಜ್ರದ ನೆಕ್ಲೆಸ್ ಹಾಗೂ ತೃತೀಯ ಬಹುಮಾನವಾಗಿ 25 ಸಾವಿರ ರೂ. ಮೌಲ್ಯದ ವಜ್ರದ ಉಂಗುರ ಗೆಲ್ಲುವ ಅವಕಾಶವಿದೆ. ನಾಲ್ಕನೇ ಬಹುಮಾನವಾಗಿ ಐದು ಸ್ಮಾರ್ಟ್ಫೋನ್ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಆಕರ್ಷಕ ಕೊಡುಗೆಗಳು ಮತ್ತು ಉಡುಗೊರೆ ವೋಚರ್ಗಳೂ ಲಭ್ಯವಿದ್ದು, ಈ ಕೊಡುಗೆ ಮಂಗಳೂರು ಮಳಿಗೆಯಲ್ಲಿ ಮಾತ್ರ ಲಭ್ಯವಿದೆ.

