ಪುತ್ತೂರು: ಹಾರ್ಡ್ ವೇರ್ ಅಂಗಡಿಯೊಂದಕ್ಕೆ ಬೆಂಕಿ ತಗಲಿ ಸಂಪೂರ್ಣ ಹಾನಿಯುಂಟಾದ ಘಟನೆ ಇಲ್ಲಿನ ಪುರುಷರಕಟ್ಟೆ ಬಳಿ ಆ.31ರ ಶನಿವಾರ ರಾತ್ರಿ ವೇಳೆ ನಡೆದಿದೆ.ಪುರುಷರಕಟ್ಟೆಯ ವಿಶ್ವಾಸ್ ಹಾರ್ಡ್ ವೇರ್ ಅಂಗಡಿಗೆ ಬೆಂಕಿ ತಗುಲಿದ್ದು, ಅಪಾರ ನಷ್ಟ ಉಂಟಾಗಿದೆ ಎನ್ನುವ ಮಾಹಿತಿ ಲಭಿಸಿದೆ.ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಅಥವಾ ಬೇರೆ ಕಾರಣದಿಂದ ಬೆಂಕಿ ತಗಲಿದೆಯೇ ಅನ್ನುವ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಇದಕ್ಕೆ ಮೂಲ ಕಾರಣದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

