ಮಂಗಳೂರು : ಪ್ರಕೃತಿ ವಿಕೋಪದಿಂದ ಅತಿಯಾಗಿ ಮಳೆ ಬಂದು ಮನೆ ಕುಸಿದು ಬಿದ್ದಿತ್ತು. ಮಂಜನಾಡಿಯಲ್ಲಿ ಮೂವರು ಮತ್ತು ದೇರಳಕಟ್ಟೆಯಲ್ಲಿ ಮಗು ಸತ್ತಿತ್ತು. ನಾಲ್ವರ ಸಾವಿನ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು ತಲಾ 5 ಲಕ್ಷದಂತೆ ಪರಿಹಾರ ನೀಡಿದ್ದಾರೆ ಎಂದು  ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದರು.

ಸ್ಥಳೀಯ ಪಂಚಾಯತ್ ನವರು ಸೇರಿ ಜಿಲ್ಲಾಡಳಿತ ರಕ್ಷಣೆಗೆ ನೆರವು ನೀಡಿತ್ತು. ಅವರಿಗೆ ಯಾವ ರೀತಿಯ ಪರಿಹಾರ ಸಿಗಲಿಲ್ಲ ಅನ್ನುವುದು ತನ್ನ ಗಮನಕ್ಕೆ ಬಂದಿಲ್ಲ. ಮನೆ ಡ್ಯಾಮೇಜ್ ಆಗಿದ್ದಕ್ಕೆ ದುಡ್ಡು ಸಿಕ್ಕಿದೆಯೋ ಇಲ್ಲವೋ ಹೇಳಲಿ ಎಂದು ಪ್ರಶ್ನಿಸಿದರು.

ಅದೇ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ಉಲ್ಟಾ ವರದಿ ನೀಡಿದ್ದು, ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತ ಆಗಿರುವ ಕುರಿತು ಪ್ರಶ್ನಿಸಿದಾಗ ಗುಡ್ಡಗಾಡು ಇರುವ ಪ್ರದೇಶದಲ್ಲಿ ಕಷ್ಟಪಟ್ಟು ಕಾಂಕ್ರೀಟ್ ಮಾಡಲಾಗಿತ್ತು.

ಆ ಸಂದರ್ಭದಲ್ಲಿ ಗುಡ್ಡವನ್ನು ಅಗೆಯುವುದು ಅನಿವಾರ್ಯ ಆಗಿತ್ತು. ಹಾಗೆಂದು ಅದಕ್ಕೆ ಇಂಜಿನಿಯರ್ ಕಾರಣವೆಂದು ಕ್ರಮಕ್ಕೆ ಮುಂದಾದರೆ ಮುಂದೆ ಇಂತಹ ಕೆಲಸಕ್ಕೆ ಇಂಜಿನಿಯರ್ ಗಳೇ ಬರಲಿಕ್ಕಿಲ್ಲ. ಪ್ರಕೃತಿ ವಿಕೋಪದಿಂದ ಅಲ್ಲಿ ದುರಂತ ಆಗಿದೆ, ಅದಕ್ಕೆ ಯಾರನ್ನೋ ದೂಷಿಸಿ ಪ್ರಯೋಜನ ಇಲ್ಲ. ಅಲ್ಲಿ ಕಾಂಕ್ರೀಟ್ ರಸ್ತೆ ಮಾಡಿದ್ದಕ್ಕೆ ಸ್ಥಳೀಯ ಜನರು ಸಂತುಷ್ಟರಾಗಿದ್ದಾರೆ ಎಂದರು.