ಮಂಗಳೂರು: ಬಂಟ್ವಾಳದಲ್ಲಿ ನಡೆದ ಹತ್ಯೆ ಬಳಿಕ ಸೆಕ್ಷನ್ ಹಾಕಲಾಗಿದ್ದು, ಯಾವುದೇ ಸಭೆ ಸಮಾರಂಭ ನಡೆಸುವ ಹಾಗೆ ಇಲ್ಲ. ಆದರೆ ಕಾಂಗ್ರೇಸ್ ನ ಅಲ್ಪಸಂಖ್ಯಾತ ಮುಖಂಡರು ಸಭೆ ಸೇರಲು ಅವಕಾಶ ಕೊಟ್ಟಿದ್ದಾರೆ. ಸೆಕ್ಷನ್ ಇದ್ರೂ ಅಷ್ಟು ಜನ ಸೇರಲು ಅವಕಾಶ ಹೇಗೆ ಕೊಟ್ರಿ- ಸಭೆ ಸೇರಿರುವ ಇವರ ಮೇಲೆ ಯಾಕೆ ಸುಮೋಟೋ ಕೇಸ್ ಹಾಕಿಲ್ಲ ಯಾಕೆ, ಅಲ್ಲದೆ ಸೆಕ್ಷನ್ ಇದ್ರೂ ಸಭೆಯಲ್ಲಿ ಗಲಾಟೆ ನಡೆದಿದೆ ಎಂದು ಭರತ್ ಶೆಟ್ಟಿ ಪ್ರಶ್ನಿಸಿ, ರಾಜ್ಯ ಸರಕಾರ ಈಗ ಕಾನೂನಲ್ಲಿಯೂ ತುಷ್ಠೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಂಗಳೂರಿನಲ್ಲಿ ಮಾತನಾಡಿದ ಅವರು ಎಲ್ಲಿ ಏನಾದ್ರೂ ಸಂಘಪರಿವಾರ ಬಿಜೆಪಿ ಕಾರಣ ಎಂದು ಸರಕಾರ ಗೂಬೆ ಕೂರಿಸುತ್ತಿದೆ. ಜಿಲ್ಲೆಯಲ್ಲಿ ಈಗಿನ ಸನ್ನಿವೇಶಗಳಿಗೆ ಕುರಿತಂತೆ ಸರಕಾರ ಜಿಲ್ಲೆಯ ಶಾಸಕರನ್ನು ಕರೆದು ಮೀಟಿಂಗ್ ಮಾಡಿಲ್ಲ. ಆದರೆ ಅವರ ತುಷ್ಠೀಕರಣದ ಕಾರಣದಿಂದ ಕಾಂಗ್ರೇಸ್ ಪಕ್ಷದಲ್ಲಿ ಇರುವ ಮುಸ್ಲಿಂ ಮುಖಂಡರನ್ನು ಕರೆದು ಮೀಟಿಂಗ್ ಮಾಡ್ತಾ ಇದ್ದಾರೆ. ಶಾಂತಿ ಸಭೆ ಎಂದರೆ ಅವರ ಪಕ್ಷದ ಅಲ್ಪಸಂಖ್ಯಾತ ಮುಖಂಡರನ್ನು ಕರೆದು ಮಾತನಾಡುತ್ತಾರೆ ಎಂದು ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ.

ರಹೀಂ ಕೊಲೆ ಆದ ಸಂದರ್ಭ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭಗವತ್ ಗೀತೆಯಲ್ಲಿ ಇದನ್ನು ಕಲಿಸುತ್ತಾರೆ ಎಂದು ಪ್ರಶ್ನೆ ಕೇಳಿದ್ದರು. ಅದೇ ಹಿಂದೂಗಳ ಹತ್ಯೆ ಆದಾಗ ದಿನೇಶ್ ಗುಂಡೂರಾವ್ ಮುಸ್ಲಿಂರಲ್ಲಿ ಕುರಾನ್ ಬಗ್ಗೆ ಕೇಳುತ್ತಾರಾ ಎಂದು ಪ್ರಶ್ನಿಸಿದರು.