ಮಂಗಳೂರು: ವಿವಿಧ ನಮೂನೆಯ ಅಲಂಕಾರಿಕ ದೀಪ, ಫ್ಯಾನ್‌ಗಳು ಮತ್ತಿತರ ಎಲೆಕ್ಟ್ರಿಕಲ್ ಸಾಧನಗಳ ಮಾರಾಟದಲ್ಲಿ ಕರಾವಳಿ ಕರ್ನಾಟಕದ ಮುಂಚೂಣಿ ಸಂಸ್ಥೆ ನಗರದ ಕದ್ರಿ ರಸ್ತೆಯಲ್ಲಿ ಬಂಟ್ಸ್ ಹಾಸ್ಟೆಲ್ ಬಳಿಯಿರುವ ‘ಎಲೆಕ್ಟ್ರಿಕಲ್ ಪಾಯಿಂಟ್’ ನವೆಂಬರ್ 27ರಂದು ತನ್ನ ಅಸ್ತಿತ್ವದ ಬೆಳ್ಳಿ ಹಬ್ಬ ಸಂಭ್ರಮದಲ್ಲಿದೆ. 2000ನೇ ಇಸವಿಯ ನವೆಂಬರ್ 27ರಂದು ಸಣ್ಣ ಮಟ್ಟದಲ್ಲಿ ಆರಂಭಗೊಂಡ ಸಂಸ್ಥೆ ಇಂದು ಬೃಹದಾಗಿ ಬೆಳೆದಿದೆ.
ವಿವಿಧ ಕಂಪೆನಿಗಳ ಅಲಂಕಾರಿಕ ದೀಪಗಳು, ಫ್ಯಾನ್ಗಳು, ವಾಟರ್ ಹೀಟರ್‌ಗಳು, ಎಲ್‌ಇಡಿ ಟ್ಯೂಬ್ ಪಿಟ್ಟಿಂಗ್ಸ್, ಎಲ್‌ಇಡಿ ಫ್ಯಾನಲ್ ಪಿಟ್ಟಿಂಗ್ಸ್, ಎಲ್‌ಇಡಿ ಸ್ಟ್ರಿಪ್ ಲೈಟ್ಸ್, ಎಲ್‌ಇಡಿ ಬಲ್ಬ್ಸ್ ಮೊಡ್ಯುಲರ್ ಸ್ವಿಚಸ್ ಮತ್ತಿತರ ಸಾಧನೆಗಳ ಮಾರಾಟದಲ್ಲಿ ಕರಾವಳಿ ಕರ್ನಾಟಕದ ಮುಂಚೂಣಿ ಸಂಸ್ಥೆ ಎನಿಸಿದೆ.
ಸಂಸ್ಥೆಯ ಗ್ರಾಹಕಪರ ಕಾಳಜಿ ಗ್ರಾಹಕರ ಸತತ ಪ್ರೀತಿ ವಿಶ್ವಾಸ ಗಳಿಸುವಲ್ಲಿ ‘ಎಲೆಕ್ಟ್ರಿಕಲ್ ಪಾಯಿಂಟ್’ಗೆ ಸಹಕಾರಿಯಾಗಿದೆ. ಸಂಸ್ಥೆಯ ವಿಶಾಲ ಸ್ಥಳಾವಕಾಶ, ದೇಶ – ವಿದೇಶಗಳ ವಿವಿಧ ಖ್ಯಾತ ಕಂಪೆನಿಗಳ ಉತ್ಪಾದನೆಗಳು, ಸಾಮಗ್ರಿಗಳ ಅತ್ಯುತ್ತಮ ಜೋಡಣೆ ಮತ್ತು ಪ್ರದರ್ಶನ, ಆಯ್ಕೆಯಲ್ಲಿ ನುರಿತ ಸಿಬ್ಬಂದಿಯ ಮಾರ್ಗದರ್ಶನ ಇಂತಹ ಹಲವಾರು ಅಂಶಗಳು ‘ಎಲೆಕ್ಟ್ರಿಕಲ್ ಪಾಯಿಂಟ್’ನ ಉನ್ನತಿಗೆ ಕಾರಣವಾಗಿವೆ.
‘ಎಲೆಕ್ಟ್ರಿಕಲ್ ಪಾಯಿಂಟ್’ ವಿವಿಧ ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ನೇರ ಮಾರಾಟಗಾರರಾಗಿದ್ದು ಅಲಂಕಾರಿಕ ದೀಪಗಳು, ಫ್ಯಾನ್, ವಿವಿಧ ನಮೂನೆಯ ಎಲ್‌ಇಡಿ ಸಾಮಗ್ರಿಗಳನ್ನು ಅಧಿಕ ಪ್ರಮಾಣದಲ್ಲಿ ಮಾರಾಟ ಮಾಡುವ ಕಾರಣ ಕಡಿಮೆ ಬೆಲೆಗಳಲ್ಲಿ ಗ್ರಾಹಕರಿಗೆ ಒದಗಿಸಲು ಸಾಧ್ಯವಾಗಿದೆ. ವಿವಿಧ ಸಾಧನಗಳಿಗೆ ವಿವಿಧ ಪ್ರಮಾಣದ ರಿಯಾಯಿತಿ ಇದ್ದು, ಅಲಂಕಾರ ದೀಪಗಳಿಗೆ 45 ಶೇಕಡಾ ರಿಯಾಯಿತಿ ದೊರೆಯುತ್ತದೆ.
ಬೆಳ್ಳಿ ಹಬ್ಬ ಮಾರಾಟ ಯೋಜನೆ:
“ಎಲೆಕ್ಟ್ರಿಕಲ್ ಪಾಯಿಂಟ್’ ಬೆಳ್ಳಿ ಹಬ್ಬ ಮಾರಾಟ ಯೋಜನೆಯನ್ನು ಹಮ್ಮಿಕೊಂಡಿದೆ. ನವೆಂಬರ್ 27ರಿಂದ 2026 ಜನವರಿ 10ರವರೆಗೆ ಚಾಲ್ತಿಯಲ್ಲಿರುವ ಈ ಯೋಜನೆಯಲ್ಲಿ ಎಲೆಕ್ಟ್ರಿಕಲ್ ಉಪಕರಣ ಮತ್ತು ಸಾಮಗ್ರಿಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. 25ನೇ ವರ್ಷದ ಸಲುವಾಗಿ ರೂ. 25,000/-ಕ್ಕೆ ಮೇಲ್ಪಟ್ಟ ಖರೀದಿಗೆ ಸ್ಥಳದಲ್ಲೇ ಖಚಿತ ಉಡುಗೊರೆ ದೊರೆಯಲಿದೆ. ಅಲಂಕಾರಿಕ ದೀಪಗಳಿಗೆ ಎಂದಿನಂತೆ ಶೇಕಡಾ 45ರಂತೆ ರಿಯಾಯಿತಿ ಇದೆ.
ಆದಿತ್ಯವಾರ ಹೊರತು ಇತರ ದಿನಗಳಲ್ಲಿ (ರಜಾ ದಿನಗಳಲ್ಲಿಯೂ) ‘ಎಲೆಕ್ಟ್ರಿಕಲ್ ಪಾಯಿಂಟ್” ಶೋರೂಮ್ ಬೆಳಿಗ್ಗೆ 9ರಿಂದ ರಾತ್ರಿ 8ರವರೆಗೆ ತೆರೆದಿರುತ್ತದೆ. ಕ್ರೆಡಿಟ್ ಕಾರ್ಡ್ ಪಾವತಿಗೆ ಅವಕಾಶವಿದೆ.
ಸಂಸ್ಥೆಯ ವಿಳಾಸ: ‘ಎಲೆಕ್ಟ್ರಿಕಲ್ ಪಾಯಿಂಟ್’, ಎಲೆಕ್ಟ್ರಿಕಲ್ ಪಾಯಿಂಟ್ ಕಾಂಪ್ಲೆಕ್ಸ್, ಬಂಟ್ಸ್ ಹಾಸ್ಟೆಲ್ ಬಳಿ, ಸಿ.ವಿ. ನಾಯಕ್ ಹಾಲ್ ಎದುರುಗಡೆ. ಕದ್ರಿ ರಸ್ತೆ, ಮಂಗಳೂರು- 575 003
ದೂರವಾಣಿ: (0824) 2447778
ವಾಟ್ಸಾಪ್: 9141691310
Email: [email protected] Website: electricalpoint.net

