ಮಂಗಳೂರು: ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ವಿದ್ಯಾರ್ಥಿನಿಯೋರ್ವಳು ಸಾವನ್ನಪ್ಪಿದ ಘಟನೆ ಇಂದು ಮಂಗಳೂರು ತಾಲೂಕಿನ ಗುರುಪುರ ಎಂಬಲ್ಲಿ ನಡೆದಿದೆ.

ಆಶ್ನಿ (21) ಮೃತ ವಿದ್ಯಾರ್ಥಿನಿ. ಮನೆಯ ದನ ಕಟ್ಟಲು ಗದ್ದೆಗೆ ಹೋದಾಗ ಈ ದುರ್ಗಟನೆ ನಡೆದಿದೆ. ತಂದೆಯ ಜೊತೆ ಗದ್ದೆಗೆ ಆಶ್ನಿ ತೆರಳಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಮನೆಯ ಸಾಕು ನಾಯಿಗೆ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ನಾಯಿ ಹೊರಳಾಡುವುದನ್ನು ನೋಡಿ ನಾಯಿಯ ರಕ್ಷಣೆಗೆ ಆಶ್ನಿ ಮುಂದಾಗಿದ್ದಾರೆ. ತುಂಡಾಗಿ ಬಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಆಶ್ನಿ ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾರೆ.