ಮಂಗಳೂರು: ರೈಲು ಹತ್ತಲು ಹೋಗಿ ನಿಯಂತ್ರಣ ಕಳೆದುಕೊಂಡ ವೃದ್ದನ ರಕ್ಷಣೆ ಮಾಡಿರುವ ಘಟನೆ ಮಂಗಳೂರಿನ ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಚಲಿಸುತ್ತಿದ್ದ ರೈಲನ್ನು ಏಕಾಏಕಿ ಹತ್ತಲು ವೃದ್ದ ಮುಂದಾಗಿದ್ದಾನೆ. ರೈಲು ವೇಗ ಪಡೆದುಕೊಂಡಂತೆ ವೃದ್ದ ನಿಯಂತ್ರಣ ಕಳೆದುಕೊಂಡಿದ್ದಾನೆ.

ರೈಲಿನಿಂದ ಕೆಳಗೆ ಬೀಳುವಷ್ಟರಲ್ಲಿ ರೈಲ್ವೆ ಸಿಬ್ಬಂದಿಯಿಂದ ವೃದ್ದನ ರಕ್ಷಣೆ ಮಾಡಿದ್ದಾರೆ. ವೃದ್ದನ ರಕ್ಷಿಸಿ ಪಕ್ಕಕ್ಕೆ ತಂದು ರೈಲ್ವೇ ಸಿಬ್ಬಂದಿ ಕೂರಿಸಿದ್ದಾರೆ. ಘಟನೆಯ ದೃಶ್ಯ ರೈಲ್ವೇ ಸ್ಟೇಷನ್ ನ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.

