ಮಣಿಪಾಲ: ಮನೋಳಿ ಗುಜ್ಜಿ ಬೆಟ್ಟುವಿನ ಮನೆಯೊಂದರಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಎಂಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವೀನ್, ಭಾಸ್ಕರ್, ಕೃಷ್ಣ, ಜಗದೀಶ, ಸಂತೋಷ್, ಶಂಕರ ಪೂಜಾರಿ, ಮಂಜುನಾಥ್, ಶಿವಯ್ಯ ಬಂಧಿತರು. ಜೂಜಾಟಕ್ಕೆ ಬಳಸಿದ 1,02,060 ರೂ., 7 ಮೊಬೈಲ್ ಫೋನ್ಗಳು, 2 ಮೋಟಾರು ಸೈಕಲ್ ಮತ್ತು 1 ಕಾರನ್ನು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

