ಮಂಗಳೂರು: ಬಾವುಟಗುಡ್ಡೆ ಈದ್ಗಾದಲ್ಲಿ ಈದುಲ್ ಫಿತರ್ ಆಚರಣೆ ಮಾಡಲಾಯಿತು. ಸಾವಿರಾರು ಮುಸಲ್ಮಾನ್ ಬಾಂಧವರಿಂದ ಸಾಮೂಹಿಕ ನಮಾಜ್ ಮಾಡಲಾಯಿತು. ಪರಸ್ಪರ ಹಸ್ತಲಾಘವ ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿದರು.

ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ , ಎಂ ಎಲ್ ಸಿ ಐವಾನ್ ಡಿ ಸೋಜ ಭಾಗಿಯಾಗಿದ್ದರು. ಹಬ್ಬದ ಸಡಗರದಲ್ಲಿ ಖಾದರ್ ಶಾಂತಿ ಸೌಹಾರ್ದತೆಯ ಸಂದೇಶ ಸಾರಿದರು. ದ.ಕ ಜಿಲ್ಲಾ ಖಾಜಿ ಅಲ್ವಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಸಾ ಪಾರಾಯಣ ಮಾಡಿದರು.

