ಮಂಗಳೂರು: ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆಎಂಸಿ ಆಸ್ಪತ್ರೆ ಮಂಗಳೂರು , ಶೀಘ್ರ ರೋಗ ಪತ್ತೆ, ಚಿಕಿತ್ಸೆ ಮತ್ತು ಕಿಡ್ನಿ ಸಮಸ್ಯೆಯ ದೀರ್ಘ ಕಾಲದ ನಿರ್ವಹಣೆಯನ್ನು ಗುರಿಯಾಗಿಸಿ ತನ್ನ ಸಮಗ್ರ ಮೂತ್ರಪಿಂಡ (ಕಿಡ್ನಿ) ಆರೈಕೆಯ ಸೇವೆಯನ್ನು ಒತ್ತಿ ಹೇಳಿದೆ. ಮೂತ್ರಪಿಂಡದ ಆರೋಗ್ಯ ಮತ್ತು ರೋಗ ತಡೆಗಟ್ಟುವ ಆರೈಕೆಯ ಕುರಿತು ಜಾಗೃತಿ ಹೆಚ್ಚುಸುವ ಈ ನೇತೃತ್ವವನ್ನು ಆಸ್ಪತ್ರೆಯ ನೆಫ್ರೊಲಾಜಿ ವಿಭಾಗವು ಕೈಗೊಂಡಿದೆ.

ಈ ವಿಭಾಗವು ಅತ್ಯಾಧುನಿಕ ಕಿಡ್ನಿ ಕಸಿ ಸೇವೆಯನ್ನು ಹಾಗೂ ದಕ್ಷಿಣಕನ್ನಡದ ಅತಿದೊಡ್ಡದಾದ ಡಯಾಲಿಸಿಸ್ಘಟಕವನ್ನು ಹೊಂದಿದ್ದು, 24 ಗಂಟೆ ನಿರಂತರ ಸೇವೆಗೆ ಮುಡಿಪಾಗಿರುವ ಮತ್ತು ಹೆಚ್ಚು ಅನುಭವಿ ನೆಫ್ರಾಲಜಿಸ್ಟ್ಗಳನ್ನು ಹೊಂದಿರುವ ಏಕೈಕ ಘಟಕವಾಗಿದ್ದು , ಸದಾ ರೋಗಿಯ ಆರೈಕೆಗೆ ಮುಡಿಪಾಗಿರುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ,ಹಿರಿಯ ನೆಫ್ರೊಲಾಜಿ ತಜ್ಞ , ಡಾ ಅಶೋಕ್ಭಟ್“ ವಿಶ್ವ ಕಿಡ್ನಿ ದಿನ ಮೂತ್ರಪಿಂಡದ ಆರೋಗ್ಯವನ್ನು ಆದ್ಯತೆಯನ್ನಾಗಿ ಪರಿಗಣಿಸುವಂತೆ ನೆನಪಿಸುವ ದಿನ. ರೋಗ ಲಕ್ಷಣಗಳು ಸಮಸ್ಯೆ ಮುಂದುವರೆದ ಹಂತ ತಲುಪಿದಾಗ ಗೋಚರವಾಗುವ ಕಾರಣದಿಂದ ಸಾಕಷ್ಟು ರೋಗಿಗಳು ಆರಂಭಿಕ ಹಂತದಲ್ಲಿ ಸಮಸ್ಯೆಯ ಕುರಿತು ಅರಿವು ಹೊಂದಿರುವುದಿಲ್ಲ.

ಆರೋಗ್ಯಕರ ಜೀವನಶೈಲಿ ಹೊಂದುವುದು, ರಕ್ತದೊತ್ತಡ ಮತ್ತು ಮಧುಮೇಹ ನಿಯಂತ್ರಣ , ಹೈಡ್ರೇಟ್ಆಗಿರುವುದು, ನಿಯಮಿತ ರಕ್ತ , ಮೂತ್ರ ಹಾಗೂ ಆರೋಗ್ಯ ಪರೀಕ್ಷೆ ಯಿಂದ ಕಿಡ್ನಿ ರೋಗದ ಅಪಾಯವನ್ನು ತಗ್ಗಿಸಬಹುದು. ರೋಗ ತಡೆಗಟ್ಟುವುದೇ ದೀರ್ಘ ಕಾಲದ ಕಿಡ್ನಿ ಆರೋಗ್ಯಕ್ಕೆ ದಾರಿ. ಪ್ರತಿಯೊಬ್ಬರು ನೆಫ್ರೊಲಾಜಿ ತಜ್ಞರನ್ನು ಭೇಟಿ ಮಾಡಿ ಸಮಸ್ಯೆಗೆ ಸಲಹೆಯನ್ನು ಪಡೆಯಬೇಕು” ಎಂದರು.

ಹಿರಿಯ ನೆಫ್ರೊಲಾಜಿ ತಜ್ಞ ಡಾ ಸುಶಾಂತ್ಕುಮಾರ್ಮಾತನಾಡಿ “ ಎಲ್ಲಾ ಕಿಡ್ನಿ ಸಮಸ್ಯೆಗೆ ಡಯಾಲಿಸಿಸ್ಒಂದೇ ಪರಿಹಾರವಲ್ಲ. ಡಯಾಲಿಸಿಸ್ಸಿಕೆಡಿಯಲ್ಲಿ 5ನೇ ಹಂತದಲ್ಲಿ ಅಥವಾ ತೀವ್ರ ಪ್ರಮಾಣದ ಸಮಸ್ಯೆಗಳು ಕಂಡುಬಂದಾಗ ಆರಂಭಿಸಬೇಕಾಗುತ್ತದೆ. ಡಯಾಲಿಸಿಸ್ಗೆ ಹೋಲಿಸಿದಾಗ ಸಿಕೆಡಿ ಅಥವಾ ಕಿಡ್ನಿ ಫೆಲ್ಯೂರ್ಸಮಸ್ಯೆಗೆ ಮೂತ್ರಪಿಂಡದ ಕಸಿ ಉತ್ತಮ ವಿಧಾನ. ಕಿಡ್ನಿ ಕಸಿ ಯಶಸ್ಸಿನ ಪ್ರಮಾಣವು ಹೆಚ್ಚಾಗಿದೆ, ಆದರೆ ಇದು ಸೂಕ್ತವಾದ ದಾನಿಗಳು ಸಿಕ್ಕಾಗ ಮಾತ್ರ ಸಾಧ್ಯ.

ಮರಣ ಹೊಂದಿರುವವರಿಂದ ಅಂಗಾಂಗ ದಾನ ಪಡೆಯಲು ನಮ್ಮಲ್ಲಿ ಸರ್ಕಾರದ ಯೋಜನೆಯಾದ ಜೀವ ಸಾರ್ಥಕತೆ ಕಾರ್ಯಕ್ರಮವಿದೆ. ಅದೇ ರೀತಿ ಜೀವಂತ ದಾನಿಗಳಿಂದ ದಾನ ಪಡೆಯಲು ನಮ್ಮ ಆಸ್ಪತ್ರೆಯಲ್ಲಿ ಸಮಿತಿಯಿದ್ದು ಅಂಗಾಂಗ ದಾನ ಆಕ್ಟ್ಗೆ ಅನುಗುಣವಾಗಿ ಎಲ್ಲಾ ರೀತಿಯ ಅನುಮತಿ, ಕಾನೂನು ಅಗತ್ಯತೆಗಳನ್ನು ಪೂರೈಸಲಾಗುತ್ತದೆ” ಎಂದರು.
ಸೌಲಭ್ಯಗಳ ಕುರಿತು ಮಾತನಾಡಿದ ನೆಫ್ರೊಲಾಜಿ ವಿಭಾಗದ ಹೆಚ್ಒಡಿ ಡಾ. ಮಯೂರ್ಪ್ರಭು “ ಕೆಎಂಸಿ ಆಸ್ಪತ್ರೆ ಮಂಗಳೂರಿನಲ್ಲಿ ನಮ್ಮ ದಕ್ಷಿಣ ಕನ್ನಡದಲ್ಲೇ ಅತಿದೊಡ್ಡ ಡಯಾಲಿಸಿಸ್ ಕೇಂದ್ರಗಳಲ್ಲಿ ಒಂದಾದ ಅಡ್ವಾನ್ಸ್ಡ್ಡಯಾಲಿಸಿಸ್ಸೇವೆ, ತಜ್ಞ ಮೂತ್ರಪಿಂಡ ಕಸಿ ತಂಡ ಮತ್ತು ಅಡ್ವಾನ್ಸ್ಡ್ಡಯಾಗ್ನೊಸ್ಟಿಕ್ಸೇವೆ ಬೆಂಬಲದ ಬಹು ವಿಭಾಗೀಯ ಚಿಕಿತ್ಸಾ ಸೇವೆಯನ್ನು ಒಳಗೊಂಡ ಸಮಗ್ರ ನೆಫ್ರಾಲಜಿ ಸೌಲಭ್ಯವನ್ನು ರೂಪಿಸಿದ್ದೇವೆ.

ನಮ್ಮ ತಂಡವು ಅತಿದೊಡ್ಡ ತಜ್ಷರ ತಂಡವಾಗಿದ್ದು ವರ್ಷದ 365 ದಿನವೂ 24 ಗಂಟೆಗಳ ಆರೋಗ್ಯ ಸೇವೆಯನ್ನು ನೀಡುತ್ತಿದೆ. ನಾವು ರೋಗಿ ಕೇಂದ್ರಿತ ಸೇವೆಗಳಾದ ಬೆಡ್ಸೈಡ್ಟ್ರೀಟ್ಮೆಂಟ್, ಐಸಿಯು ನಲ್ಲಿ ಡಯಾಲಿಸಿಸ್ಸೌಲಭ್ಯ, ಶೂನ್ಯ ಹರಡುವಿಕೆಯ ವಿಧಾನದೊಂದಿಗೆ ಹೆಚ್ಐವಿ ಮತ್ತು ಹೆಚ್ಬಿಎಸ್ಎಜಿ ಸೋಂಕಿತರಿಗೆ ವಿಶೇಷ ಡಯಾಲಿಸಿಸ್ಸೌಲಭ್ಯ, ಸುಸಜ್ಜಿತ ಹೆಚ್ಡಿಎಫ್ ಡಯಾಲಿಸಿಸ್ ಘಟಕ ಮತ್ತು ನಿಯಮಿತ ಡಯಾಲಿಸಿಸ್ ಅಗತ್ಯವಿರುವ ಹಾಸಿಗೆ ಹಿಡಿದ ರೋಗಿಗಳಿಗೆ ಮೀಸಲಾದ ಸಾರಿಗೆ ಬೆಂಬಲವನ್ನು ಒದಗಿಸಲಾಗುತ್ತದೆ. ಈ ಪ್ರದೇಶದಲ್ಲಿ ರೋಗಿ-ಕೇಂದ್ರಿತ ನೆಫ್ರಾಲಜಿ ಸೇವೆಗಳನ್ನು ವಿಸ್ತರಿಸುವುದನ್ನು ಮುಂದುವರಿಸುವುದರೊಂದಿಗೆ ಮೂತ್ರಪಿಂಡದ ಕಾಯಿಲೆಗಳ ಜಾಗೃತಿ, ಆರಂಭಿಕ ಪತ್ತೆ ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಆಸ್ಪತ್ರೆ ಪುನರುಚ್ಚರಿಸುತ್ತದೆ” ಎಂದರು.