ಮಂಗಳೂರು: ದಾಂಡಿಯ ಹೆಸರಿನಲ್ಲಿ‌ ಅಸಭ್ಯ ನೃತ್ಯಕ್ಕೆ ಹಿಂದೂ ಸಂಘಟನೆಗಳ ಭಾರೀ ವಿರೋಧ ವ್ಯಕ್ತಪಡಿಸಿದ್ದು, ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯಕ್ಕೆ ಅವಕಾಶ ಕೊಡದಂತೆ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ.

ಮಂಗಳೂರಿನಲ್ಲಿ ದಾಂಡಿಯಾ ಹೆಸರಿನಲ್ಲಿ ಮಾದಕದ್ರವ್ಯ ಸೇವನೆ ಮಾಡಿ ಅಸಭ್ಯ ನೃತ್ಯ ಕಾರ್ಯಕ್ರಮ ನಡೆಯುತ್ತದೆ. ಯುವಕ -ಯುವತಿಯರಿಗೆ ಮುಕ್ತ ಅವಕಾಶ ಇದೆ. ದಾಂಡಿಯಾ ಹೆಸರಿನ ಅಸಭ್ಯ ನೃತ್ಯ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ವಿಎಚ್‌ಪಿ ದುರ್ಗಾವಾಹಿನಿ ಮನವಿ ಮಾಡಿದೆ.

ಕಳೆದ ಡ್ರಗ್ಸ್‌, ಮಾದಕದ್ರವ್ಯ ಸೇವನೆ, ಅಸಭ್ಯ ನೃತ್ಯಗಳ ಮಾಡಿದ ಬಗ್ಗೆ ದೂರು ಕೇಳಿ ಬಂದಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಮಂಗಳೂರು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸುಕನ್ಯಾ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.