ಮಂಗಳೂರು : ಉಳ್ಳಾಲ ಭಾಗದಲ್ಲಿ ಪ್ರತಿ ಮಳೆಗೂ ಮುಳುಗುವ ಸ್ಥಿತಿಯಾಗಿದೆ. ಇದೇ ರೀತಿಯಾದರೆ ಸಣ್ಣ ಮಳೆಗೂ ಮುಳುಗುವ ಬೆಂಗಳೂರಿನ ಸ್ಥಿತಿ ಇಲ್ಲಿಗೂ ಬರಲಿದೆ. ರಾಜಕಾಲುವ ಅತಿಕ್ರಮಿಸಿದ್ದನ್ನು ತೆರವು ಮಾಡುವ ಕಾರ್ಯ ಆಗಬೇಕಿದೆ.

ಇದಕ್ಕಾಗಿ ಡೋನ್ ಮೂಲಕ ಸರ್ವೆ ನಡೆಸಿ, ಗುರುತು ಹಾಕಲಾಗುವುದು. ಅತಿಕ್ರಮಣ ಮಾಡಿದವರು ಅಧಿಕಾರಿಗಳಿಗೆ ಕೆಲಸ ಕೊಡದೆ ತಾವಾಗಿಯೇ ತೆರವು ಮಾಡಿದರೆ ಉತ್ತಮ ಎಂದು ಹೇಳಿದ ಖಾದರ್, ಉಳ್ಳಾಲ ರೈಲ್ವೇ ಕ್ರಾಸಿಂಗ್ ಬಹುದಿನದ ಬೇಡಿಕೆಯನ್ನು ರೈಲ್ವೇ ಇಲಾಖೆ ಒಪ್ಪಿದ್ದು ಎರಡು ಕೋಟಿ ವೆಚ್ಚದಲ್ಲಿ ಅಂಡ‌ರ್ ಪಾಸ್ ಮಾಡಲಿದೆ ಎಂದು ಹೇಳಿದರು.