ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆ ಸುಹಾಸ್ ಶೆಟ್ಟಿ ಮನೆಗೆ ಡಾ.ಸಂತೋಷ್ ಗುರೂಜಿ ಭೇಟಿ ನೀಡಿದರು. ಬರ್ಕೂರು ಮಹಾ ಸಂಸ್ಥಾನಂನ ಪೀಠಾಧಿಪತಿ ಡಾ.ಸಂತೋಷ್ ಗುರೂಜಿ ಸುಹಾಸ್ ಹೆತ್ತವರಿಗೆ ಸಾಂತ್ವನ ಹೇಳಿದರು. ಬಳಿಕ ಡಾ.ಸಂತೋಷ್ ಗುರೂಜಿ ಹೇಳಿಕೆ ನೀಡಿದರು.
ಸುಹಾಸ್ ಹತ್ಯೆಯಲ್ಲಿ ಪೊಲೀಸ್ ಇಲಾಖೆ ಮೇಲೆ ಅನುಮಾನ ಬರುತ್ತದೆ. ಕಳೆದ 15 ದಿನಗಳಿಂದ ಒಬ್ಬನೇ ಓಡಾಡಬೇಕು,ಹತ್ಯಾರು ಇಡಬಾರದು ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ಇದ್ರ ಹಿಂದೆ ಏನೋ ಇದೆ. ಪೊಲೀಸರ ಸಹಕಾರ ಇದ್ಯಾ ಅನ್ನೋದಕ್ಕಾಗಿ ನ್ಯಾಯಾಂಗ ತನಿಖೆ ಅಥವಾ ಎನ್ ಐಎ ತನಿಖೆ ನಡೆಸಬೇಕು.
ಸುಹಾಸ್ ಕುಟುಂಬ ಬಹಳ ಬಡತನದಲ್ಲಿರೋ ಕುಟುಂಬ. ಆಧಾರ ಸ್ತಂಬವಾಗಿದ್ದ ಮಗ ಇಲ್ಲದಂತಾಗಿದೆ. ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಯಾವುದೇ ರಾಜಕೀಯ ಯಾರೂ ಮಾಡಬಾರದು. ಹೆಣದ ಮೇಲೆ ರಾಜಕೀಯ ಮಾಡೋದು ಸೂಕ್ತವಲ್ಲ ಎಂದರು.

