ಮಂಗಳೂರು: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೃಹ ಸಚಿವರ ಬಗ್ಗೆಯೇ ಪ್ರಶ್ನೆ ಎತ್ತಿದರು. ನೀವು ಇಷ್ಟು ಬಾರಿ ಮಂಗಳೂರಿಗೆ ಬಂದರೂ, ಎರಡು ವರ್ಷದಲ್ಲಿ ಒಮ್ಮೆಯೂ ಇಲ್ಲಿನ ಶಾಸಕರು, ಸಂಸದರ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿಲ್ಲ. ಜಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗೃಹ ಸಚಿವರ ಬಗ್ಗೆಯೇ ಪ್ರಶ್ನೆ ಎತ್ತಿದರು. ನೀವು ಇಷ್ಟು ಬಾರಿ ಮಂಗಳೂರಿಗೆ ಬಂದರೂ, ಎರಡು ವರ್ಷದಲ್ಲಿ ಒಮ್ಮೆಯೂ ಇಲ್ಲಿನ ಶಾಸಕರು, ಸಂಸದರ ಜೊತೆಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾತಾಡಿಲ್ಲ. ನರ ಸಮಸ್ಯೆಗಳನ್ನು ನಿಮ್ಮ ಮುಂದಿಡುವುದು ಶಾಸಕರ ಕರ್ತವ್ಯ ಎಂದರು.
ಸರ್ಕಾರ, ಪೊಲೀಸರ ಕೆಲಸ ಕೇವಲ ಭಯ ಮೂಡಿಸುವುದಕ್ಕಲ್ಲ. ಶಾಂತಿ ಸಭೆಗೂ ಎಲ್ಲರನ್ನೂ ಯಾಕೆ ಕರೆದಿಲ್ಲ. ಈ ಸಭೆಯ ಪಟ್ಟಿ ತಯಾರಿಸುವಾಗ ನಮ್ಮ ಮಾತನ್ನು ಕೇಳಬಹುದಿತ್ತಲ್ವಾ, ಜನರ ಪರವಾಗಿ ನಾವು ಇಲ್ಲ ಎನ್ನುವ ಭಾವನೆ ಬರುವಂತೆ ಆಡಳಿತದ ನಡೆ ಇರಬಾರದು ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಸರಕಾರದ ಆಡಳಿತ ವೈಫಲ್ಯವನ್ನು ಜನರ ಮೇಲೆ ಹೇರದಿರಿ. ನಿಮ್ಮ ವಿಚಾರ ಒಪ್ಪಿಲ್ಲ ಅಂತ ಕೋಮು ದ್ವೇಷದ ಹೊಣೆಯನ್ನು ಜನರ ತಲೆಗೆ ಕಟ್ಟುವುದಲ್ಲ. ಮಂಗಳೂರಿನ ಜನರು ಕೋಮುವಾದಿ, ಹಿಂಸಾಕೋರರು ಎಂಬುದಾಗಿ ಬಿಂಬಿಸಬೇಡಿ. ಸೈದ್ಧಾಂತಿಕ ವಿಚಾರದಲ್ಲಿ ಯಾರದ್ದೇ ತಪ್ಪಾದರೂ ಕಾನೂನು ಪ್ರಯೋಗಿಸಿ, ನಿಗ್ರಹ ಮಾಡಿ. ನಾವು ಸರಿ ಮಾಡಿದರೆ ಜನರು ಓಟು ಕೊಡುತ್ತಾರೆ, ಇಲ್ಲದೇ ಇದ್ದರೆ ನಮ್ಮನ್ನು ಮನೆಗೆ ಕಳಿಸುತ್ತಾರೆ.
ಎರಡು ವರ್ಷ ಆದರೂ ಸರಿಯಾದ ಮರಳು ನೀತಿಯನ್ನು ಯಾಕೆ ಮಾಡಲಾಗಿಲ್ಲ. ಜಿಲ್ಲೆಯ ಮೈನಿಂಗ್ ಅಧಿಕಾರಿಗಳು ಭ್ರಷ್ಟರಿದ್ದಾರೆ. ಜಿಲ್ಲೆಯ ಮಿನರಲ್ ಫಂಡನ್ನು ನಮ್ಮ ಶಾಸಕರ ಮಾತನ್ನೂ ಕೇಳದೆ ವಿಲೇವಾರಿ ಮಾಡುತ್ತಾರೆ ಎಂದು ಸಂಸದ ಚೌಟ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದರು ಕೆಲವು ವಿಚಾರ ಎತ್ತಿದಾಗ, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನಾವು ಎಲ್ಲ ಮತೀಯರನ್ನು ಎಲ್ಲ ಸಂಘ ಸಂಸ್ಥೆಯವರನ್ನೂ ಸಭೆಗೆ ಕರೆದಿದ್ದೇವೆ, ಯಾಕೆ ಆಕ್ಷೇಪ ತೆಗೆಯುತ್ತಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಹೇಳಿದರು. ಈ ವೇಳೆ, ಆಗಿರುವ ತಪ್ಪನ್ನು ಒಪ್ಪಿಕೊಳ್ಳಿ ಎಲ್ಲ ಸಂಘಟನೆಯವರನ್ನು ಕರೆದಿಲ್ಲ ತಾನೇ ಎಂದು ಹರೀಶ್ ಪೂಂಜ ಟಾಂಗ್ ಇಟ್ಟರು. ಬಜರಂಗದಳ, ವಿಹಿಂಪದವರನ್ನು ಯಾಕೆ ಕರೆದಿಲ್ಲ. ಅವರಿಗೂ ತಮ್ಮ ಭಾವನೆ ಹೇಳಿಕೊಳ್ಳುವ ಹಕ್ಕು ಇಲ್ಲವೇ, ಹಿಂದು ಸಮಾಜದಲ್ಲಿ ಸ್ವಾಮೀಜಿಗಳು ಇಲ್ಲವೇ ಎಂದು ಭರತ್ ಶೆಟ್ಟಿ ಕೇಳಿದರು.

