ಮಂಗಳೂರು: ಜೋಸಫ್ ಮಥಾಯಸ್ ಅವರಿಗೆ ಸಮಾಜ ಸೇವೆ ಅಥವಾ ಕಲಾ ಕ್ಷೇತ್ರದಲ್ಲಿ ನೀಡಿದ ಸೇವೆಗಾಗಿ ಕರ್ನಾಟಕ ರಾಜ್ಯ ಸರಕಾರ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಮಂಗಳೂರು-ಶಿಬ್ರಿಕೆರೆ ನಿವಾಸಿಯಾಗಿರುವ ಮೆರಿಟ್ ಪ್ರೈಟ್ ಸಿಸ್ಟಂ ಕಂಪೆನಿ ಎಲ್.ಎಲ್.ಸಿ. ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜೋಸಫ್ ಮಥಾಯಸ್ ಅವರು ಕನ್ನಡ ಭಾಷೆ, ಸಂಸ್ಕೃತಿ ಕಲೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಕನ್ನಡ ಭಾಷೆ ಹಾಗೂ ಕಲೆಗಳ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಕನ್ನಡ ಪರ ಸಂಘಟನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಕನ್ನಡಪರ ಸಂಘಟನೆಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿರುವ ಇವರು ಕಲಾ ಪೋಷಕರಾಗಿದ್ದಾರೆ. ಯಕ್ಷಗಾನ ಸಹಿತ ಇತರ ಸಾಂಸ್ಕೃತಿಕ ಕಲೆಗಳಾದ, ಕುರುಕುರು ಮಾಮ, ಬಾಳಸಂತ್, ಧಪ್ ಮೊದಲಾದ ಕಲೆಗಳಿಗೆ ಸದಾ ಪೋತ್ಸಾಹ ನೀಡುತ್ತಾ ಬಂದಿರುವ ಇವರು ಸಮಾಜದ ಬಡವರ ಬಗ್ಗೆ ಅತೀವ ಕಾಳಜಿ ವಹಿಸಿ ಅನೇಕ ಸಾಮಾಜಿಕ ಕಾರ್ಯವನ್ನು ನಿರ್ವಹಿಸಿದ್ದಾರೆ.

