ಮಂಗಳೂರು: ಕರ್ನಾಟಕದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾದ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ ಆರಂಭವಾಗಲಿದೆ. ಮಂಗಳೂರಿನಿಂದ ಮೂರು ಮಾರ್ಗದಲ್ಲಿ ಹೊಸ ವಿಮಾನ ಸೇವೆಯನ್ನು ಆರಂಭಿಸುವ ಕುರಿತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಣೆ ಮಾಡಿದೆ, ವೇಳಾಪಟ್ಟಿಯನ್ನು ಸಹ ಘೋಷಣೆ ಮಾಡಿದೆ. ಇದರಿಂದಾಗಿ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ.
ಮಂಗಳೂರು-ಸಿಂಗಾಪುರ ನೇರ ವಿಮಾನ ಸೇವೆ ಕುರಿತು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ‘ನಮ್ಮ ಮಂಗಳೂರಿನಿಂದ ಸಿಂಗಾಪುರಕ್ಕೆ ನೇರ ವಿಮಾನ ಸೇವೆ.
ಹೊಸ ವರ್ಷದಲ್ಲಿ ನಮ್ಮ ಮಂಗಳೂರಿನಿಂದ ಸಿಂಗಪುರಕ್ಕೆ ನೇರವಾಗಿ ಎರಡು ವಿಮಾನಗಳು ಸಂಚರಿಸಲಿವೆ ಎಂಬ ಸಂತಸದ ಸುದ್ದಿ ನಮಗೆ ದೊರೆತಿದೆ. ಈ ಸೇವೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಒದಗಿಸಲಿದೆ. ಇದರ ಜೊತೆಗೆ, ಪುಣೆ ಮತ್ತು ದೆಹಲಿಗೂ ಕೂಡ ಎರಡು ಹೊಸ ನೇರ ವಿಮಾನ ಸೇವೆಗಳು ಆರಂಭವಾಗಲಿವೆ’ ಎಂದು ಹೇಳಿದ್ದಾರೆ.
ಮಂಗಳೂರಿನಿಂದ ಸಿಂಗಾಪುರದ ಚಾಂಗಿಗೆ ನೇರ ವಿಮಾನ ಸಂಪರ್ಕ ಕಲ್ಪಿಸುವಂತೆ ಬೇಡಿಕೆ, ಒತ್ತಾಯ ಕೇಳಿಬಂದಿತ್ತು. ಈ ನಿಟ್ಟಿನಲ್ಲಿ, ಗೌರವಾನ್ವಿತ ನಾಗರಿಕ ವಿಮಾನಯಾನ. ಸಚಿವ ಕಿಂಜಿರಾವು ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದು ಈ ಬಗ್ಗೆ ಮನವಿ ಸಲ್ಲಿಸಿದ್ದೆ. ಇದೀಗ ಈ ಪ್ರಯತ್ನದ ಫಲವಾಗಿ ಮಂಗಳೂರು-ಸಿಂಗಾಪುರದ ನಡುವೆ ನೇರ ವಿಮಾನ ಸೇವೆ ಆರಂಭವಾಗುತ್ತಿರುವುದು ನಂತನ ತಂದಿದೆ’ ಎಂದು ನಂಸದರು ತಿಳಿಸಿದ್ದಾರೆ.

