ಮಂಗಳೂರು : ಮುಂದಿನ ಆರು ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸೇರಿದಂತೆ ಎರಡೂ ಸದನಗಳಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಯಾಗಲಿದೆ ಎಂದು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಎರಡು ಸದನಗಳ ಡಿಜಿಟಲೀ ಕರಣಕ್ಕೆ ಸರಕಾರದ ಅನುಮೋದನೆ ದೊರೆತಿದೆ.ಕೇಂದ್ರ ಮತ್ತು ರಾಜ್ಯ ಸರಕಾರದ ತಲಾ ಶೇ. 50ರ ಅನುದಾನದೊಂದಿಗೆ ಈ ಡಿಜಿಟಲೀಕರಣ ನಡೆಸಲು ಸಮ್ಮತಿಸಿದೆ.
ಬೆಂಗಳೂರು, ಬೆಳಗಾವಿ ಸೇರಿ 78 ಕೋಟಿ ಹಾಗೂ ವಿಧಾನ ಪರಿಷತ್ ಗೆ 52 ಕೋಟಿ ಯ ಡಿಪಿಆರ್ ಮಾಡಲಾಗಿದೆ. ಇದರಿಂದ ಕಾಗದ ರಹಿತ ಆಡಳಿತ ವ್ಯವಹಾರ ನಡೆಸುವ ಕಾರಣ ಉಳಿತಾಯ ವಾಗಲಿದೆ. ಸದನದ ಸದಸ್ಯರಿಗೂ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಹಾಜರಾತಿ ವ್ಯವಸ್ಥೆ ಬದಲಾಗಲಿದೆ ಎಂದರು.

