ಮಂಗಳೂರು: ದಿಗಂತ್ ನಾಪತ್ತೆ ವಿಚಾರವಾಗಿ ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ಹೇಳಿಕೆ ನೀಡಿದ್ದಾರೆ. ಹತ್ತು ದಿನಗಳಾಗಿದೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಿದೆ. ಇದು ಪೊಲೀಸರ ವೈಫಲ್ಯವೋ ಗೊತ್ತಿಲ್ಲ ಎಂದರು.

ಇದು ಬಹಳ ಗಂಭೀರ ಮತ್ತು ಆಘಾತಕಾರಿ ವಿಚಾರವಾಗಿದೆ. ಉಸ್ತುವಾರಿ ಸಚಿವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ತನಿಖೆ ಪೊಲೀಸರಿಗೆ ಭೇದಿಸಲು ಆಗಿಲ್ಲ.ಈ ಪ್ರಕರಣವನ್ನು ಸಿಐಡಿ, ಸಿಬಿಐ ತನಿಖೆಗೆ ನೀಡಲಿ ಎಂದರು.