ಮಂಗಳೂರು : ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 10 ರಂದು ಸೌಜನ್ಯ ಕೊಲೆಯಾಗಿ ಹದಿನಾಲ್ಕು ವರ್ಷ ಪೂರ್ಣ. ಹದಿನಾಲ್ಕು ವರ್ಷದ ಹೋರಾಟದಿಂದ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿದೆ ಎಂದರು.

ಸೌಜನ್ಯ ಕೊಲೆ ಪ್ರಕರಣಕ್ಕೆ ಇದು ಸಂದ ದೊಡ್ಡ ಜಯ. ಅಕ್ಟೋಬರ್ 10ರಂದು ನ್ಯಾಯದ ನಡಿಗೆ ಮೆರವಣಿಗೆ ಇರಲಿದೆ. ಉಜಿರೆಯಿಂದ ಬೆಳ್ತಂಗಡಿ ವರೆಗೆ ನ್ಯಾಯದ ನಡಿಗೆ ಆಗಲಿದೆ. ಸುಪ್ರೀಂ ಕೋರ್ಟ್ ಮತ್ತು ಹೈ ಕೋರ್ಟ್ ನ ನ್ಯಾಯವಾದಿಗಳ ತಂಡ ಬರಲಿದೆ. ಎಸ್ ಐ ಟಿ ತನಿಖೆ ಯಾರೇ ಮಾಡಲಿ ನ್ಯಾಯ ಸಿಗುವ ವಿಶ್ವಾಸ ಇದೆ.

ನ್ಯೂನ್ಯತೆಗಳಿದ್ದರೆ ತಕ್ಷಣ ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇವೆ. ಸಂತೋಷ್ ರಾವ್ ಗೆ ಈಗಾಗಲೇ ಎರಡು ಸಂಸ್ಥೆ ಕ್ಲೀನ್ ಚಿಟ್ ನೀಡಿದೆ. ಈ ಹಿಂದೆ ತನಿಖೆ ಮಾಡಿದ ತನಿಖಾ ಸಂಸ್ಥೆಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಚಾಟಿ ಬೀಸಿದೆ. ಪ್ರಕರಣದ ನೈಜ ಆರೋಪಿಗಳು ಈ ತನಿಖೆಯಿಂದ ಹೊರ ಬರಲಿದೆ ಎಂದರು.