ಮಂಗಳೂರು: ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತಂಡ ಬದಲಾವಣೆಗೆ ಆಗ್ರಹ ಹಿನ್ನಲೆ ಗಿರೀಶ್ ಮಟ್ಟಣ್ಣನ್ನವರ್ ಸ್ಪಷ್ಟನೆ ನೀಡಿದ್ದಾರೆ. ನಮಗೆ ಶಶಿಕುಮಾರ್ ಮೇಲೆ ಯಾವುದೇ ವೈಯುಕ್ತಿಕ ದ್ವೇಷ ಇಲ್ಲ. ಆದರೆ ಜನರೇ ಅವರ ಬಗ್ಗೆ ದೂರು, ಅಪಸ್ವರ ಎತ್ತಿದ್ದಾರೆ ಎಂದರು.
ನಮಗೆ ಯಾರು ತನಿಖೆ ಮಾಡಿದರೂ ಅಪಸ್ವರ ಇಲ್ಲ. ಸಾಮಾನ್ಯ ಪೊಲೀಸ್ ಕಾನ್ ಸ್ಟೇಬಲ್ ಮಾಡಿದ್ರೂ ಅಪಸ್ವರ ಇಲ್ಲ. ಸುಪ್ರೀಂ ಕೋರ್ಟ್ ಅಡಿಯಲ್ಲಿ ಈ ತನಿಖೆ ನಡೆಯುತ್ತದೆ. ಇದಕ್ಕೆ ಉತ್ತರದಾಯಿ ಮುಖ್ಯಮಂತ್ರಿ ಯೇ ಆಗಿದ್ದಾರೆ. ಮುಖ್ಯಮಂತ್ರಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದರು.

