ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ವಿಎಚ್ ಪಿ ಎಂಟ್ರಿಯಾಗಿದ್ದು, ಧರ್ಮಸ್ಥಳ ಕುರಿತ ಅಪಪ್ರಚಾರದ ದುಷ್ಟ ಷಡ್ಯಂತ್ರ ದೂರವಾಗಲು ಇಂದಿನಿಂದ ಒಂದು ವಾರದ ಕಾಲ ಶಿವ ಪಂಚಾಕ್ಷರಿ ನಾಮ ಜಪ ಮಂಗಳೂರಿನ ಕದ್ರಿ ಕ್ಷೇತ್ರದಲ್ಲಿ ನಡೆಯಲಿದೆ.

ಇಡೀ ರಾಜ್ಯದ ಜನರಿಗೆ ವಿಶ್ವಹಿಂದೂ ಪರಿಷತ್ ಕರೆ ನೀಡಲಾಗಿದೆ. ಧರ್ಮಸ್ಥಳ  ಕ್ಷೇತ್ರ ಹಿಂದೂಗಳ ಶೃದ್ದಾ ಕ್ಷೇತ್ರದ ವಿರುದ್ದ ನಡೆಯುತ್ತಿರುುವ ಷಡ್ಯಂತ್ರ ನಿಲ್ಲಬೇಕು.

ಮಂಗಳೂರಿನ ಕದ್ರಿ ಕ್ಷೇತ್ರದಲ್ಲಿ ವಿಎಚ್ ಪಿ ಮುಖಂಡರಿಂದ ವಿಶೇಷ ಪೂಜೆ ನಡೆಸಲಾಗುತ್ತಿದೆ.  ದೇವಾಲಯದ ಆವರಣದಲ್ಲಿ ಶಿವ ಪಂಚಾಕ್ಷರಿ ನಾಮ ಜಪ ನಡೆಯುತ್ತಿದ್ದು, ನೂರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.