ಮಂಗಳೂರು: ಲೋಕಸಭಾ ಅಧಿವೇಶನದಲ್ಲಿ ಹಿಂದುತ್ವದ ಅವಹೇಳನ ಮಾಡಿದ್ದಾರೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು, ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.
ಬಂಟ್ವಾಳ ತಾಲೂಕಿನ ಪವರ್ ಫುಲ್ ದೇವಿಗೆ ರಾಹುಲ್ ಗಾಂಧಿ ವಿರುದ್ಧ ವಿಶ್ವ ಹಿಂದು ಪರಿಷತ್ ಮುಖಂಡರು ದೂರು ನೀಡಿರುವುದು ಕಂಡುಬಂದಿದೆ. ದೇವರ ನಿಂದನೆ, ಧರ್ಮವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ್ದಾರೆ ಎಂದು ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಿಗೆ ದೂರು ನೀಡಲಾಗಿದೆ.
ಶ್ರೀ ಕ್ಷೇತ್ರ ಪೊಳಲಿಯಲ್ಲಿ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಮೂಲಕ ವಿಶ್ವ ಹಿಂದು ಪರಿಷತ್ ಮುಖಂಡರು ದೇವಿಗೆ ದೂರು ಕೊಟ್ಟು, ರಾಹುಲ್ ಗಾಂಧಿಗೆ ಒಳ್ಳೆ ಬುದ್ಧಿಕೊಟ್ಟು, ಈ ಹೇಳಿಕೆಗೆ ತಕ್ಕ ಶಿಕ್ಷೆ ನೀಡಲು ಪ್ರಾರ್ಥನೆ ಮಾಡಿದ್ದಾರೆ.

