ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2024-25, ವಸ್ತು ಪ್ರದರ್ಶನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 22ರಿಂದ ಜನವರಿ 19 ರ ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಕದ್ರಿ ಉದ್ಯಾನವನ, ಮಂಗಳೂರು ರೋಬೋಟಿಕ್ ಚಿಟ್ಟೆಗಳ ಪ್ರದರ್ಶನ ನಡೆಯಲಿದೆ.

ಇಂದು ಸಂಜೆ 6.30ರಿಂದ T.C.R.ಬ್ಯಾಂಡ್ ಮತ್ತು ಬಳಗ ದಿಂದ ಲೈವ್ ಬ್ಯಾಂಡ್ ನಡೆಯಲಿದೆ. ಸೋಮವಾರ 23.12.2024 ರಂದು ಸಂಜೆ 6.30ರಿಂದ ನೃತ್ಯೋಪಾಸನ ಕಲಾ ಅಕಾಡೆಮಿ (ರಿ) ಪುತ್ತೂರು ಇವರಿಂದ ನೃತ್ಯರೂಪಕ ನಡೆಯಲಿದೆ.ಮಂಗಳವಾರ 24.12.2024 ರಂದು 6.30ರಿಂದ ದೇವದಾಸ್ ಕಾಪಿಕಾಡ್ ನಿರ್ದೇಶನದ ತುಳು ಹಾಸ್ಯನಾಟಕ ‘ಎಲ್ಲಾ ಗ್ಯಾರಂಟಿಯತ್ತ್‌ ನಡೆಯಲಿದೆ.

ಬುಧವಾರ 25.12.2024 ರಂದು 6.30 ರಿಂದ ಜೀ ಟಿವಿ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಇಟಿವಿ ಖ್ಯಾತಿಯ ಕಲಾವಿದರಿಂದ ಮಧುರ ಗೀತೆಗಳು ನಡೆಯಲಿದೆ. ಗುರುವಾರ 26.12.2024 ರಂದು 6.30 ರಿಂದ ಲೋಕೇಶ್ ಸಾಲ್ಯಾನ್ ಬ್ಯಾಂಡ್ ಮತ್ತು ಬಳಗದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ 27.12.2024ರಂದು 6.30 ರಿಂದ ರಂಜನ್ ಬ್ಯೂರೋ & ಬಳಗ, ಬೆಂಗಳೂರು ಇವರಿಂದ ಮೆಲೋ ಟೀ ಖ್ಯಾತಿಯ ಪ್ಯೂಶನ್ ಬ್ಯಾಂಡ್ ನಡೆಯಲಿದೆ.

ಶನಿವಾರ 28.12.2024 ರಂದು 6.30 ರಿಂದ ನೃತ್ಯಾಂಕುರ ಕಲಾತಂಡ, ಮಂಗಳ ಗಂಗೋತ್ರಿ ಯಿಂದ ಸಾಂಸ್ಕೃತಿಕ ವೈವಿಧ್ಯ, ಮಕ್ಕಳ ಬ್ಯಾಂಡ್ (ಸರಿಗಮಪ ಬಳಗ)ದಿಂದ ಮಧುರ ಗೀತೆಗಳು ನಡೆಯಲಿದೆ. ಭಾನುವಾರ 29.12.2024 ರಂದು ಸಂಜೆ 6.30ರಿಂದ ಕುದ್ರೋಳಿ ಗಣೇಶ್ ಮತ್ತು ತಂಡದಿಂದ ವಿಸ್ಮಯ ಜಾದೂ ನಡೆಯಲಿದೆ. ಸೋಮವಾರ 30.12.2024 ರಂದು ಸಂಜೆ 6.30ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲದಿಂದ ನೃತ್ಯರೂಪಕ ನಡೆಯಲಿದೆ.