ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಿನ್ನಿಗೋಳಿ ಪರಿಸರದಲ್ಲಿನ ಸಾರ್ವಜನಿಕರಿಗೆ ಮಾರುಕಟ್ಟೆಯಲ್ಲಿ ಹಣವನ್ನು ಹೊಡಿಕೆ ಮಾಡಿ ಲಾಭಾಂಶ ನೀಡುವುದಾಗಿ ಸುಮಾರು 1.5 ಕೋಟಿ ಹಣ ಹಾಗೂ ಚಿನ್ನವನ್ನು ಪರಿಚಯಸ್ದರಿಂದ ಪಡೆದು ಹಲವರಿಗೆ ವಂಚಿಸಿದ್ದಾರೆ.
ಆರೋಪಿಗಳಾದ ರಿಚ್ಚರ್ಡ್ ಡಿ ಸೋಜಾ, 52 ವರ್ಷ ಪ್ರಾಯ , ತಂದೆ: ಪ್ಯಾಟ್ರಿಕ್ ಡಿಸೋಜಾ, ಖಾಯಂ, ಮನೆ ನಂಬ್ರ 2-81, ಕವತ್ತಾರು ಗುರಿ ಮನೆ, ಕವತ್ತಾರು ಅಂಚೆ ಮತ್ತು ಗ್ರಾಮ. ಶ್ರೀಮತಿ ರಶ್ಮಿ ರೀಟಾ ಪಿಂಟೋ, 47 ವರ್ಷ ಪ್ರಾಯ, ಗಂಡ: ರಿಚ್ಚರ್ಡ್ ಡಿ ಸೋಜಾ, ಮನೆ ನಂಬ್ರ 2-81, ಕವತ್ತಾರು ಗುರಿ ಮನೆ, ಕವತ್ತಾರು ಅಂಚೆ ಮತ್ತು ಗ್ರಾಮ, ರವರ ಮೇಲೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಠಾಣಾ ಅಕ್ರ: 145/2024 ಕಲಂ: 406,420 ಐಪಿಸಿ ಹಾಗೂ ಮುಲ್ಕಿ ಪೊಲೀಸ್ ಠಾಣಾ ಅಕ್ರ: 17/2025 ಕಲಂ: 406,420 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
ಸದ್ರಿ ಪ್ರಕರಣದಲ್ಲಿ ಬಂಧನಕ್ಕೆ ಸಿಗದೇ ಸುಮಾರು 1 ವರೆ ವರ್ಷಗಳಿಂದ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ದಂಪತಿಗಳನ್ನು ಮುಲ್ಕಿ ಪೊಲೀಸರು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಅರೋಪಿ ರಿಚ್ಚರ್ಡ್ ಡಿ ಸೋಜಾ, 52 ವರ್ಷ ಪ್ರಾಯ, ತಂದೆ: ಪ್ಯಾಟ್ರಿಕ್ ಡಿಸೋಜಾ, ಮನೆ ನಂಬ್ರ 2-81, ಕವತ್ತಾರು ಗುರಿ ಮನೆ, ಕವತ್ತಾರು ಅಂಚೆ ಮತ್ತು ಗ್ರಾಮ, ಮುಲ್ಕಿ ತಾಲೂಕು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

