ಮಂಗಳೂರು: ಇಂದು ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ತಯಾರಿ ಪೂರ್ಣಗೊಂಡಿದೆ. ಸುರತ್ಕಲ್ ಎನ್.ಐ.ಟಿ.ಕೆ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಹೀಗಾಗಿ ವಿಧಾನಸಭಾವಾರು ಮತ ಎಣಿಕೆ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದೆ. 14,09,653 ಇವಿಎಂ ಮತಗಳು ಹಾಗೂ 8537 ಪೋಸ್ಟಲ್ ಮತಗಳ ಎಣಿಕೆ ನಡೆಯಲಿದ್ದು, ಒಟ್ಟು 137 ಸುತ್ತುಗಳಲ್ಲಿ 8 ಕೊಠಡಿಗಳಲ್ಲಿ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 18 ರಿಂದ 19 ಸುತ್ತು ಮತ ಎಣಿಕೆ ನಡೆಯುತ್ತದೆ. ಇವಿಎಂ ಮತ ಎಣಿಕೆಗೆ 8 ಕೊಠಡಿಗಳಲ್ಲಿ 112 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.
8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ ಇದ್ದು, 554 ಸಿಬ್ಬಂದಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ. ಬೆ.6 ರಿಂದ ವಿಧಾನಸಭಾವಾರು ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ಬೆಳಿಗ್ಗೆ 8:30 ಕ್ಕೆ ಎವಿಎಂ ಮತ ಎಣಿಕೆ ಪ್ರಾರಂಭಗೊಳ್ಳಲಿದ್ದು ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದ ಭದ್ರತಾ ವ್ಯವಸ್ಥೆ ಇರುತ್ತದೆ.
ಮತ ಎಣಿಕೆ ಕೇಂದ್ರದ 100 ಮೀಟರ್ ಒಳಗಡೆ ವಾಹನ ಸಂಚಾರ ನಿಷೇಧಿಸಲಾಗಿದೆ. ಎಲ್ಲಾ ಕೊಠಡಿಯಲ್ಲೂ ಸಿಸಿ ಟಿ.ವಿ ಅಳವಡಿಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

