ಮಂಗಳೂರು : ಬೀದಿಬದಿ ವ್ಯಾಪಾರಿಗಳ ಸ್ವಾವಲಂಬನೆಯ ಕಿರು ಸಾಲ ಯೋಜನೆಯಾದ ಪಿ.ಎಂ. ಸ್ವನಿಧಿ ಯೋಜನೆಯನ್ನು ಸರಕಾರ ತಡೆಹಿಡಿದಿರುವುದರಿಂದ ಬಡ ಬೀದಿ ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ಸಂಕಷ್ಟ ಉಂಟಾಗಿದೆ.
ಈಗಾಗಲೇ ಕಿರುಸಾಲ ಪಡೆದ ಬೀದಿ ವ್ಯಾಪಾರಿಗಳು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ರೂ. 10,000 ಎರಡನೇ ಹಂತದಲ್ಲಿ ರೂ. 20,000/- ಮೂರನೇ ಹಂತದಲ್ಲಿ ರೂ. 50,000/- ಸಾಲ ವಿತರಣೆ ಮಾಡಲಾಗುತ್ತಿತ್ತು.
ಆದರೆ ಕಳೆದ 7-8 ತಿಂಗಳಿನಿಂದ ಪಿ.ಎಂ. ಸ್ವನಿಧಿ ಸಾಲ ಪಡೆಯಲು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಅಸಾಧ್ಯವಾಗುತ್ತಿದೆ. ನಿಯಮಿತವಾಗಿ ಸಾಲ ಮರುಪಾವತಿ ಮಾಡಿರುವ ಬೀದಿ ವ್ಯಾಪಾರಿಗಳಿಗಾಗಿ ಪಿ.ಎಂ. ಸ್ವನಿಧಿ ಯೋಜನೆ ಮುಂದುವರಿಸಬೇಕಿದೆ. ಮ.ನ.ಪಾ. ಕಚೇರಿ ಎದುರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

