ಮಂಗಳೂರು : ಉಡುಪಿ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿರೋದಕ್ಕೆ ಕಾಂಗ್ರೆಸ್ ನಾಯಕರ ವಿರೋಧ ವಿಚಾರವಾಗಿ ಮಂಗಳೂರಿನಲ್ಲಿ ಗುರುಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿನ ನಾಯಕರಿಗೆ ಧರ್ಮದ ಬಗ್ಗೆ ಅರಿವಿಲ್ಲ. ಮನೆಯಲ್ಲಿಯೂ ಇದನ್ನು ಆಚರಿಸುತ್ತಾರಾ ಅಂತಾ ಗೊತ್ತಿಲ್ಲ ಎಂದರು.

ನಮ್ಮಲ್ಲಿ ಭಗವದ್ವಜಕ್ಕೆ ವಿಶೇಷ ಗೌರವ ಇದೆ. ಜಿಲ್ಲಾಧಿಕಾರಿಗಳು ಸರ್ಕಾರದ ಒಂದು ಭಾಗ ಆಗಿರಬಹುದು. ಆದ್ರೆ ಅವರದ್ದೇ ಆದ ಕರ್ತವ್ಯದಲ್ಲಿ ಭಾಗವಹಿಸಬಹುದು.ಅದಕ್ಕೆ ಸರ್ಕಾರ ನಿರ್ಬಂಧಿಸಬಾರದು. ನಮ್ಮ ಧಾರ್ಮಿಕ ವ್ಯವಸ್ಥೆಯೊಳಗೆ ಅನ್ಯ ಮತೀಯ ಅಧಿಕಾರಿಯನ್ನು ತರ್ತಾರೆ. ಅದಕ್ಕೂ ಇವರು ಸಮರ್ಥನೆ ಮಾಡ್ತಾರೆ. ಹಿಂದೆ ಅನ್ಯಮತೀಯ ಜಿಲ್ಲಾಧಿಕಾರಿಯವರು ಅವರ ಧಾರ್ಮಿಕ ಕ್ಷೇತ್ರಕ್ಕೆ ಹೋಗಿದ್ರು ಎಂದರು.

ಅವರನ್ನು ಸರ್ಕಾರ ತಡೆದಿದೆಯಾ..?, ಈಗ ಯಾಕೆ ಅವಹೇಳನ ಮಾಡಿ ಅವರ ಪದವಿಗೆ ಕಪ್ಪು ಚುಕ್ಕೆ ತರೋದು. ಸಮಸ್ಯೆ ಮಾಡಬೇಕೆಂಬ ಹುನ್ನಾರ ಇವರದ್ದು. ಅಲ್ಲಿ ಜಾತಿ, ಧರ್ಮ ಬರಬಾರದು. ಅಲ್ಲಿ ಅನ್ಯಜಾತಿಯವರು ಕಾಯಿ, ಪಲ್ಲೆ ಎಲ್ಲಾ ತರ್ತಾರೆ‌. ಅದನ್ನು ಬೇಡಾ ಅಂತಾ ಪರ್ಯಾಯದವರು ಹೊರಗಿಟ್ಟಿದ್ದಾರಾ.? ಅಲ್ಲಿ ಎಲ್ಲರೂ ಬಂದು ಊಟ ಮಾಡ್ತಾರೆ. ಅಲ್ಲಿ‌ ಎಲ್ಲೂ ಜಾತಿಯ ಭಾವ ಬಂದಿಲ್ಲ ಎಂದರು.