ಮಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಠಿತ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ನಾದಸ್ವರ ಕಲಾವಿದ ವಿದ್ವಾನ್ ನಾಗೇಶ್ ಎ. ಬಪ್ಪನಾಡು ಅವರಿಗೆ ಮಂಗಳೂರಿನಲ್ಲಿ ಸನ್ಮಾನ ನಡೆಯಲಿದೆ.
ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ವತಿಯಿಂದ ಭಾನುವಾರ ಸಂಜೆ 5 ಗಂಟೆಗೆ ಸುರತ್ಕಲ್ನಲ್ಲಿ ಆಯೋಜಿಸಲಾಗಿರುವ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯ ವೇಳೆ ಈ ಗೌರವ ಸಮರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಜ್ಞಾ ಅಡಿಗ ಅವರಿಂದ ಸಂಗೀತ ಕಚೇರಿ ಹಾಗೂ ರಶ್ಮಿ ಉಡುಪ ಅವರಿಂದ ಭರತನಾಟ್ಯ ಪ್ರದರ್ಶನ ಇರಲಿದೆ. ಉಡುಪಿಯ ಸರಿಗಮ ಸಂಗೀತ ವಿದ್ಯಾಲಯದ ವಿದುಷಿ ವಾರಿಜಾಕ್ಷಿ ಆರ್. ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

