ಮಂಗಳೂರು : ಜಿಲ್ಲೆಗೆ ಅನಾಮಿಕ ಬಂದ ಬಳಿಕ ಅನೇಕ ಚರ್ಚೆ ಆಗ್ತಾ ಇದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆ ಆಗ್ತಾ ಇದೆ. ಇದ್ರ ಬಗ್ಗೆ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಬಿಜೆಪಿ ಸೌಜನ್ಯ ಪ್ರಕರಣ ತನಿಖೆ ಪರವಾಗಿದೆ. ಸೌಜನ್ಯ ನ್ಯಾಯಕ್ಕೆ ಯಾವುದೇ ತನಿಖೆ ಮಾಡಿದ್ರು ಬೆಂಬಲಿಸುತ್ತೆ, ಬಿಜೆಪಿ ನಿಲುವು ಸೌಜನ್ಯಲಿಗೆ ನ್ಯಾಯ ಒದಗಿಸುವ ಯಾವುದೇ ಕ್ರಮಕ್ಕೂ ಬದ್ದ. ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಜಿ ಅವರಿಗೆ ಅಪಮಾನ ವಿಚಾರವಾಗಿ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿ ನಡೆಸಿದರು.
ನಮ್ಮ ನಾಯಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡ್ತಾ ಇದ್ದಾರೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಮಾನ ಮಾಡುವಂತೆ ಮಾಡ್ತಾ ಇದ್ದಾರೆ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಮಾಡ್ತಾ ಇದ್ದಾರೆ. ಎಸ್ಐಟಿ ಅವರ ಕೆಲಸ ಮಾಡಲಿ ಅದ್ರ ಬಗ್ಗೆ ನಮ್ಮ ವಿರೋಧ ಇಲ್ಲ. ಅನಾಮಿಕನ ಹಿಂದೆ ಮೂರು ಮಂದಿ ಇದ್ದಾರೆ ಅಂತಾರೆ. ಅದ್ರಲ್ಲೂ ಈ ಹಿಂದಿನ ಜಿಲ್ಲಾಧಿಕಾರಿ ಸೆಂಥಿಲ್ ಅವರ ಹೆಸ್ರು ಇದೆ.
ಸೆಂಥಿಲ್ ಹೆಸರು ಮಾಧ್ಯಮದಲ್ಲಿ ಬರ್ತಾ ಇದೆ. ಸೆಂಥಿಲ್ ಅವ್ರು ಅನಾಮಿಕನ ಹಿಂದೆ ಇದ್ದಾರ…?. ಡಿಕೆಶಿ ಕೂಡಾ ಇದ್ರ ಹಿಂದೆ ಷಡ್ಯಂತ್ರ ನಡಿತಿದೆ ಎಂದಿದ್ರು. ಇದ್ರ ಹಿಂದೆ ಯಾರಿದ್ದಾರೆ ಷಡ್ಯಂತ್ರ ಇದೆಯಾ ಎಂಬುದು ಯಾಕೆ ತನಿಖೆ ಮಾಡ್ತಾ ಇಲ್ಲ. ಅನಾಮಿಕನ ಹಿಂದೆ ಮೂರು ಮಂದಿ ಇದ್ದಾರ…? ಯಾಕೆ ಈ ವಿಚಾರವಾಗಿ ತನಿಖೆ ಮಾಡ್ತಾ ಇಲ್ಲ. ಕಾಂಗ್ರೇಸ್ ಆಡಳಿತಕ್ಕೆ ಬಂದ ಬಳಿಕ ಹಿಂದೂಗಳ ಮೇಲೆ ಧಾರ್ಮಿಕ ನಂಬಿಕೆ ಮೇಲೆ ಸವಾರಿ ಮಾಡ್ತಾ ಇದೆ. ಸಮೀರ್ ನನ್ನು ಬಂಧನ ಮಾಡಬೇಕು, ಅನಾಮಿಕನನ್ನು ಇದ್ರ ಹಿಂದೆ ಇರುವವರನ್ನು ಬಂಧನ ಮಾಡಬೇಕು ಎಂದರು.

