ಮಂಗಳೂರು: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗಿಕ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರದಂದು ದೀಕ್ಷಾರಾಂಭ ಸಮಾರಂಭವು ನಡೆಯಿತು.

ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾ.ಶೈಜು , ಜಿಲ್ಲಾ ಪ್ರೋಗ್ರಾಮ್ ಮ್ಯಾನೇಜರ್ , ಕೇರಳ ಸರಕಾರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬದಲಾದ ಜೀವನಶೈಲಿಯಿಂದ ಉಂಟಾಗಿರುವ ಆರೋಗ್ಯ ತೊಂದರೆಗಳಿಗೆ ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಪರಿಹಾರವಾಗಿದೆ.

ಇದಲ್ಲದೆ ಮನುಷ್ಯ ಸದಾ ಆರೋಗ್ಯವಿರುವಂತೆ ಮಾಡುವುದು ಪ್ರಕೃತಿ ಚಿಕಿತ್ಸೆಯೆಂಬ ಪಾರಂಪರಿಕ ಚಿಕಿತ್ಸೆ, ಔಷಧಿಗಳಿಲ್ಲದೆ ರೋಗಗಳ ವಿರುದ್ಧ ಹೋರಾಡುವ ದೇಹಗಳ ಶಕ್ತಿಯನ್ನು ನಂಬಿರುವ ಪ್ರಕೃತಿ ಚಿಕಿತ್ಸೆಯು ಸ್ವಯಂ-ಗುಣಪಡಿಸುವ ಮಾರ್ಗವನ್ನು ಅನುಸರಿಸುತ್ತದೆ. ಹಾಗೆಯೆ ಬಿ.ನೈ.ವೈ.ಸ್ ಕೋರ್ಸ್ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗು ಅವರ ಪೋಷಕರಿಗೆ ತಿಳಿಸಿಕೊಟ್ಟರು.ಡಾ .ಅಸ್ವಿನಿ ದತ್ತ್ ಡೀನ್ ಒಫ್ ಅಕ್ಯಾಡೆಮಿಕ್ಸ್ , ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವೃತ್ತಿಪರ ಶಿಕ್ಷಣ ಮೊದಲ ಹೆಜ್ಜೆಯಾಗಿದ್ದರಿಂದ ವಿದ್ಯಾರ್ಥಿಗಳ ಇವತ್ತಿನ ಪರಿಶ್ರಮ ನಾಳೆ ಯಶಸ್ಸಿನ ಗುಟ್ಟು ನಿಮ್ಮ ಕನಸುಗಳು ಕಠಿಣ ಪರಿಶ್ರಮ ದಿಂದ ಸಿಕ್ಕ ಸಣ್ಣ ಅವಕಾಶಗಳನ್ನು ಉಪಯೋಗಿಸಿಕೊಂಡು ಒಂದೊಂದು ಗೆಲುವಿನ ಮೆಟ್ಟಿಲನ್ನು ಏರುತ್ತ ಹೋಗಿ ನೀವು ನಿಮ್ಮ ಕೊನೆಯ ಮೆಟ್ಟಿಲನ್ನು ಏರಿದಾಗ ನಿಮಗಾಗುವ ಖುಷಿ ಹಾಗೂ ಸಂತೋಷಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕಿವಿಮಾತು ನೀಡಿದರು . ಡಾ. ಪುನೀತ್ ರಾಘವೇಂದ್ರ ಪ್ರಾಂಶುಪಾಲರು ನೆರೆದಿರುವ ಎಲ್ಲರನು ಸ್ವಾಗತಿಸಿದರು. ಡಾ ಶ್ರೇಯ ಸಭೆಯನ್ನು ವಂದಿಸಿದರು. ಕುಮಾರಿ ಶೈಜನ ಕಾರ್ಯಕ್ರಮವನ್ನು ನಿರೂಪಿಸಿದರು.