ಮಂಗಳೂರು: ಭಾರತ ಸರ್ಕಾರ, ಸಹಕಾರ ಸಚಿವಾಲಯ, ಸಹಕಾರ ಚುನಾವಣಾ ಪ್ರಾಧಿಕಾರ, ನವದೆಹಲಿ, ಇವರ ಕಛೇರಿ ಆದೇಶ ಸಂಖ್ಯೆ CEA-12011/233/2025, No.32/2025-26 2008 05.05.2025 20 ಕೋಕೋ ಮಾರುಕಟ್ಟೆ ಮತ್ತು ಸಂಸ್ಕರಣ ಸಹಕಾರಿ ನಿಯಮಿತ (ಕ್ಯಾಂಗ್ಲೆ) ಆಡಳಿತ ಮಂಡಳಿ ಚುನಾವಣೆಯನ್ನು ಪ್ರಕಟಿಸಿದೆ.
ಆಡಳಿತ ಮಂಡಳಿಗೆ ಒಟ್ಟು 19 ಸ್ಥಾನಗಳು ಇರುತ್ತದೆ. ಇದರಲ್ಲಿ ಕರ್ನಾಟಕ ರಾಜ್ಯದಿಂದ 10 ಮತ್ತು ಕೇರಳ ರಾಜ್ಯದಿಂದ 9 ಸದಸ್ಯರು ವಿವಿಧ ಕ್ಷೇತ್ರಗಳಿಂದ ಆಯ್ಕೆ ಆಗಲಿದ್ದಾರೆ ಕರ್ನಾಟಕ ರಾಜ್ಯದಿಂದ ಸಾಮಾನ್ಯ ಮಹಿಳಾ, ಪರಿಷಿಷ್ಟ ಜಾತಿ / ಪರಿಶಿಷ್ಟ ವಂಗಡ ಮತ್ತು “ಎ’ಸಿ ‘ಬಿ’ ವರ್ಗಗಳು ಹಾಗೂ ಕೇರಳ ರಾಜ್ಯದಿಂದ ಸಾಮಾನ್ಯ ಮಹಿಳಾ, “ಎ’& ‘ಬಿ’ ಮತ್ತು ‘ಸಿ’ ವರ್ಗಗಳ ಆಡಳಿತ ಮಂಡಳಿಯಲ್ಲಿರುವ ಸ್ಥಾನಗಳಿಗೆ ನೇರ ಸ್ಪರ್ಧೆ ಇರುವುದಿಲ್ಲ.
ಕರ್ನಾಟಕ ರಾಜ್ಯದ ಸಾಮಾನ್ಯ ‘ಸಿ’ ವರ್ಗದ 6 ಸ್ಥಾನಗಳು ಬಾಕಿ ಉಳಿದಿರುವುದರಿಂದ, ಈ ವಿಭಾಗದ ಚುನಾವಣೆಯನ್ನು 23.11.2025 ರಂದು ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 4.00 ಗಂಟೆಯವರೆಗೆ ಶಾರದಾ ವಿದ್ಯಾಲಯ, ಕೊಡಿಯಲ್‌ಬೈಲ್, ಮಂಗಳೂರು ಇಲ್ಲಿ ನಡೆಸಲಾಗುತ್ತದೆ.
ಈ ಚುನಾವಣೆಯಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದ ಒಟ್ಟು 5,576 “ಸಿ’ ವರ್ಗ ಮತ್ತು 75 ಎ’& ‘ಬಿ’ ವರ್ಗದ ಕ್ಯಾಂಪ್ಲೋದ ಎಲ್ಲಾ ಅರ್ಹ ಮತದಾರರು ಮತದಾನ ಮಾಡಲು ಹಕ್ಕನ್ನು ಹೊಂದಿದ್ದಾರೆ.ಈ ಚುನಾವಣೆಯನ್ನು ಕರ್ನಾಟಕ ರಾಜ್ಯದ ‘ಸಿ’ ವರ್ಗದ ವಿಭಾಗಕ್ಕೆ ಮಾತ್ರ ನಡೆಸಲಾಗುತ್ತಿದ್ದು, ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇವರಲ್ಲಿ 6 ಮಂದಿಯನ್ನು ಆಯ್ಕೆ ಮಾಡಬೇಕಾಗಿರುತ್ತದೆ.ಮತ ಎಣಿಕೆಯನ್ನು 25.11.2025 ರಂದು ಬೆಳಿಗ್ಗೆ 8.00 ಗಂಟೆಯಿಂದ ಮಂಗಳೂರು ಕ್ಯಾಂಪ್ಲೆದ ಮುಖ್ಯ ಕಛೇರಿಯಲ್ಲಿ ನಡೆಸಲಾಗುತ್ತಿದೆ.

