ಮಂಗಳೂರು: ಆಳ ಸಮುದ್ರ ದಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ಕಾರ್ಯಾಚರಣೆ ನಡೆಸಿತು. ಅತ್ಯಂತ ಸವಾಲಿನ ಕಡಲ ಶೋಧ ಮತ್ತು ರಕ್ಷಣೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಮಾಡಿತು. ಅಪಾಯದಲ್ಲಿದ್ದ ಮೀನುಗಾರರನ್ನು ತಟ ರಕ್ಷಣಾ ಪಡೆ ಯೋಧರು ರಕ್ಷಿಸಿದರು.

ಆಳ ಸಮುದ್ರದಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆ ಇದಾಗಿದ್ದು, 33 ನಾಟಿಕಲ್ ಮೈಲ್ಸ್ ದೂರ ಆಳ‌ ಸಮುದ್ರದಲ್ಲಿ ಕಾರ್ಯಾಚರಣೆ ನಡೆಯಿತು. ಉಡುಪಿಯ ಮಂಜು ಮಾತಾ ಹೆಸರಿನ ಮೀನುಗಾರಿಕಾ ಬೋಟ್ ನಲ್ಲಿದ್ದ 6 ಮಂದಿ ಮೀನುಗಾರರನ್ನು ತಟ ರಕ್ಷಣಾ ಪಡೆ ರಕ್ಷಿಸಿತು.

ಬೋಟ್ ನ ತಳಭಾಗಕ್ಕೆ ಹಾನಿಯಾಗಿ ಬೋಟ್ ನೊಳಗೆ ಸಮುದ್ರ ದ ನೀರು ನುಗ್ಗುತ್ತಿತ್ತು. ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ ತುರ್ತು ಸಂದೇಶ ರವಾನೆ ಮಾಡಲಾಯಿತು. ತುರ್ತು ಸಂದೇಶ ಸ್ವೀಕರಿಸಿ ಕೋಸ್ಟ್ ಗಾರ್ಡ್ ಬೋಟ್ ICG ಸಚೇತ್ ಕಾರ್ಯಾಚರಣೆ ನಡೆಸಿದರು.

ಮುಳುಗುತಿದ್ದ ಮೀನುಗಾರಿಕಾ ಬೋಟ್ ಮಂಜು ಮಾತಾ ಪತ್ತೆ ಹಚ್ಚಿ 90ನಿಮಿಷ ಗಳ ಸವಾಲಿನ ರಕ್ಷಣಾ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಯೋಧರು ನಡೆಸಿದರು. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ರಕ್ಷಣಾ ಕಾರ್ಯಾಚರಣೆ ನಡೆಯಿತು. ರಿಮೋಟ್-ಆಪರೇಟೆಡ್ ಲೈಫ್‌ಬಾಯ್ಸ್ ಗಳನ್ನು ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

View this post on Instagram

A post shared by News Karnataka (@newskarnataka)