ಮಂಗಳೂರು: ಯೆನೇಪೋಯಾ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ನೀತಿಶಾಸ್ತ್ರದ ಕೇಂದ್ರ, (Centre for Ethics, Yenepoya Deemed to be University) ದ ವತಿಯಿಂದ ಜೂನ್ 2 ಮತ್ತು 3, 2025 ರಂದು “ಹವಾಮಾನ ಬದಲಾವಣೆ ಮತ್ತು ಲಿಂಗ” ವಿಷಯದ ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು NIH (Grant No. 1R25TW010305), NCE ಇದರ ಸಹಕಾರದಿಂದ ನಡೆಸಲಾಯಿತು.

 

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಂತರರಾಷ್ಟ್ರೀಯ ಅಧ್ಯಾಪಕರಾದ ಡಾ. ಝಾನೆಲೆ ಫುರುಸಾ, ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯ ಉಪನ್ಯಾಸಕಿ ಮತ್ತು ಪರಿಸರ ವಕೀಲರು ಮತ್ತು ಡಾ. ವೀನಾ ವಾಸ್ವಾನಿ ಅವರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಲಿಂಗ ಅಸಮಾನತೆ, ಹವಾಮಾನ ಬದಲಾವಣೆಯ ಸಿದ್ಧಾಂತಗಳು, ಆಹಾರ ಭದ್ರತೆ, ಹಾಗೂ ಜನಜಾತಿ ಸಮುದಾಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ವೈಚಾರಿಕ ಹಾಗೂ ಸಂವಾದಾತ್ಮಕ ಚರ್ಚೆಗಳು ನಡೆಯಿತು.

ಕಾರ್ಯಕ್ರಮ ಹೈಬ್ರಿಡ್ ಮಾದರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವಿಶ್ವವಿದ್ಯಾನಿಲಯದೊಳಗಿನ ಹಾಗೂ ಅಂತರರಾಷ್ಟ್ರೀಯ ಸಹಭಾಗಿತ್ವದ ಸಂಸ್ಥೆಗಳ ಒಟ್ಟು 16 ಮಂದಿ ವಿವಿಧ ಶಾಖೆಗಳಿಂದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಲಾಭ ಪಡೆದರು. ಪಾಲ್ಗೊಂಡ ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲ ಅಧಿವೇಶನಗಳನ್ನೂ ಪ್ರಶಂಸಿಸಿದರು. ಸಮಾರೋಪ ಸಮಾರಂಭದಲ್ಲಿ ಯೆನೆಪೊಯಾ ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಡೀನ್ ಡಾ. ಅಶ್ವಿನಿ ದತ್. ಆರ್. (Dr. Aswini Dutt R ) ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಸಂಪನ್ಮೂಲ ವ್ಯಕ್ತಿ ಮತ್ತು ಪ್ರತಿನಿಧಿಗಳಿಗೆ ಧನ್ಯವಾದ ಸಮರ್ಪಣೆ ಮತ್ತು ಮೆಚ್ಚುಗೆಯ ಪ್ರಮಾಣಪತ್ರ ವಿತರಣೆಯೊಂದಿಗೆ ಮತ್ತು ಗುಂಪು ಛಾಯಾಚಿತ್ರದೊಂದಿಗೆ ಮುಕ್ತಾಯವಾಯಿತು.