ಮಂಗಳೂರು: ಎಸ್‌ಸಿಎಸ್ ಆಸ್ಪತ್ರೆ, ಮಂಗಳೂರು  ಇದರ 38 ವರ್ಷಗಳ  ಶ್ರೇಷ್ಠ ನಿಸ್ವಾರ್ಥ ಸೇವೆಯ ಸಂಭ್ರಮಾಚರಣೆ ಕಾರ್ಯಕ್ರಮ  ಮತ್ತು ನೂತನವಾಗಿ  ನಿರ್ಮಾಣಗೊಂಡ  ಫುಜಿಫಿಲ್ಮ್ ಜಪಾನ್‌ನ ೧೨೮  ಸ್ಪ್ಲೆಸ್ ಕಾರ್ಡಿಯಕ್ ಸಿಟಿ   ಸ್ಕ್ಯಾನ್ ನೊಂದಿಗೆ  ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯವು ಇಂದು   ಲೋಕಾರ್ಪಣೆಗೊಂಡಿತ್ತು.

ಉದ್ಘಾಟನಾ  ಸಮಾರಂಭಕ್ಕೆ  ಮುಖ್ಯ ಅಥಿತಿಯಾಗಿ  ಆಗಮಿಸಿದ   ದಕ್ಷಿಣ ಕನ್ನಡ  ಜಿಲ್ಲೆಯ  ಸಂಸದರಾದ  ಕ್ಯಾ.  ಬ್ರಿಜೇಶ್  ಚೌಟ  ಮಾತನಾಡಿ, ಕಳೆದ  ೩೮  ವರ್ಷಗಳಿಂದ  ಎಸ್‌ಸಿಎಸ್ ಆಸ್ಪತ್ರೆಯು  ಜನ ಸೇವೆಯಲ್ಲಿ  ತನ್ನನ್ನು  ತಾನು  ತೊಡಗಿಸಿಕೊಂಡಿದೆ .  ದೇಶದ  ಪ್ರಮುಖ ಪಟ್ಟಣಗಳಲ್ಲಿ  ಒಂದಾದ  ಮಂಗಳೂರು  ಇಂದು  ವೈದ್ಯಕೀಯ ಕ್ಷೇತ್ರದಲ್ಲಿ  ಮುಂದುವರೆದಿದೆ.

 

View this post on Instagram

 

A post shared by News Karnataka DK/Udupi (@newstulu)

ಮಂಗಳೂರು  ವೈದ್ಯಕೀಯ  ಕ್ಷೇತ್ರದಲ್ಲಿ  ಮುಂದುವರೆದಿದ್ದರೆ  ಅವುಗಳಿಗೆ  ಕಾರಣ   ಇಂತಹ  ಆವಿಷ್ಕಾರಗಳ  ಅನುಷ್ಠಾನ ,  ಮುಂದುವರೆದ  ತಂತ್ರಜ್ಞಾನದ   ಬಳಕೆ , ಉತ್ತಮ  ಗುಣ ಮಟ್ಟದ  ಅರೋಗ್ಯ ಸೇವೆಯಾಗಿದೆ  .  ಪ್ರಧಾನಿ  ಮೋದಿಜಿಯವರು  ಆರೋಗ್ಯ  ಅಭಿವೃದ್ಧಿಗಾಗಿ  ಹಲವಾರು  ಯೋಜನೆಗಳನ್ನು ಕೈಗೊಂಡು  ಆರೋಗ್ಯ ಭಾರತದ  ನಿರ್ಮಾಣದ  ಹರಿಕಾರರಾಗಿದ್ದರೆ . ಹಾಗೆಯೇ  ಜಿ ಎಸ್  ಟಿ ಯಲ್ಲಿ  ದಿನ ಬಳಕೆಯ  ಔಷಧಗಳ  ಮೇಲಿನ ತೆರಿಗೆಯ  ಹೊರೆಯನ್ನು ಇಳಿಸಿ   ಅನಾರೋಗ್ಯ  ಪೀಡಿತರಿಗೆ  ಸಹಕಾರಿ ಮಾಡಿದ್ದಾರೆ . ಸರಕಾರ , ಸರಕಾರೇತರ , ಸಮಾಜ ಮುಖಿ  ಸಂಸ್ಥೆಗಳು   ಆರೋಗ್ಯ   ಭಾರತವನ್ನು  ಕಟ್ಟಲು ಸಹಾಯ ಮಾಡಬೇಕೆಂದು  ಕೇಳಿಕೊಂಡರು.

ಯಾವುದೇ  ಒಂದು  ಊರಿನಲ್ಲಿ    ಸುಸ್ಥಿರವಾದ    ಸಮಾಜವನ್ನು  ಕಟ್ಟಬೇಕಾದರೆ  ಆರೋಗ್ಯ  ಎಂಬುದು  ಮುಖ್ಯವಾಗಿ  ಬೇಕಾಗುತ್ತದೆ . ಹಾಗೆಯೇ  ಮಂಗಳೂರು  ಭಾಗದಲ್ಲಿ ಕಳೆದ  ೩೮  ವರ್ಷ ಗಳಿಂದ  ಉತ್ತಮ  ಆರೋಗ್ಯವನ್ನು  ನೀಡುವಲ್ಲಿ   ಎಸ್‌ಸಿಎಸ್  ಸಂಸ್ಥೆಯು ಕೊಡುಗೆಯನ್ನು ನೀಡಿದೆ  ಎಂದರು.

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಜೀ  ಮಾತನಾಡಿ ,  ಕರಾವಳಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆಗಳಲ್ಲಿ ಒಂದಾದ ಎಸ್‌ಸಿಎಸ್ ಆಸ್ಪತ್ರೆಯು  ನಿಸ್ವಾರ್ಥ ಸೇವೆಯನ್ನು  ನೀಡುತ್ತಾ  ಬಂದಿದೆ. ಕಳೆದ  ೩೮  ವರ್ಷಗಳ  ಹಿಂದೆ    ಎಸ್‌ಸಿಎಸ್ ಆಸ್ಪತ್ರೆಯು ಹುಟ್ಟಿ  ಹಂತ ಹಂತವಾಗಿ  ಬೆಳೆದು ಇಂದು  ದೊಡ್ಡ ಮಟ್ಟದ  ಸಂಸ್ಥೆಯಾಗಿ  ಬೆಳೆದು  ನಿಂತಿದೆ  . ಅತ್ಯಾಧುನಿಕ  ತಂತ್ರಜ್ಞಾನದ  ಪ್ರಯೋಗವು  ಆರೋಗ್ಯ  ಸುಧಾರಣೆಯಲ್ಲಿ  ಮಹತ್ವದ  ಪಾತ್ರವನ್ನುವಹಿಸಿದೆ.

ಇಂದು  ಲೋಕಾರ್ಪಣೆಗೊಂಡ    ಕಾರ್ಡಿಯಕ್ ಸಿಟಿ   ಸ್ಕ್ಯಾನ್  , ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‌ಎಬಿಎಲ್  ಮಾನ್ಯತೆ ಪಡೆದ ಪ್ರಯೋಗಾಲಯವು   ಉತ್ತಮ  ಆರೋಗ್ಯವಂತ  ಸಮಾಜವನ್ನು  ನಿರ್ಮಾಣ ಮಾಡಲಿದೆ. ಎಸ್‌ಸಿಎಸ್ ಆಸ್ಪತ್ರೆಯಲ್ಲಿ  ಉತ್ತಮ  ಆರೋಗ್ಯ  ಸೇವೆಯನ್ನು  ನಿಸ್ವಾರ್ಥವಾಗಿ  ನೀಡುವ ಜೊತೆಗೆ  ರೋಗಿಗಳನ್ನು  ಉತ್ತಮವಾಗಿ  ನೋಡಿಕೊಳ್ಳುವ ಮನಸ್ಸುಗಳನ್ನು  ಹೊಂದಿದೆ  ಎಂದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ   ವೇದವ್ಯಾಸ್ ಕಾಮತ್  ಮಾತನಾಡಿ  , ಆಧುನಿಕ ತಂತ್ರಜ್ಞಾವನ್ನು  ಅಳವಡಿಸಿಕೊಂಡು ಸಂಸ್ಥೆಯು   ಆರೋಗ್ಯ  ಸಮಾಜವನ್ನು  ಕಟ್ಟುತ್ತಾ  ಸಾಗುತ್ತಿದೆ. ಸಂಸ್ಥೆಯು  ಇಂದು  ಗುರುತಿಸಿಕೊಂಡಿರುವುದು ತನ್ನ  ಸೇವಾ ಮನೋಭಾವನೆಯಿಂದ.   ಎಸ್‌ಸಿಎಸ್ ಆಸ್ಪತ್ರೆಯು   ಹೊಸ  ಹೊಸ  ಆಲೋಚನೆಗಳು ಉತ್ತಮ  ಆರೋಗ್ಯಯುತ  ಸಮಾಜವನ್ನು ಕಟ್ಟುವ  ದೃಷ್ಟಿಕೋನವನ್ನು  ಹೊಂದಿದೆ.  ಹೊಸ ಹೊಸ  ರೀತಿಯ  ಚಿಂತನೆಗಳು ಸುಸ್ಥಿರ  ಸಮಾಜವನ್ನು  ಕಟ್ಟುತ್ತದೆ ಅದಕ್ಕೆ  ಈ ಸಂಸ್ಥೆಯು  ಕೈಗನ್ನಡಿಯನ್ನು  ಹಿಡಿದಿದೆ ಎಂದು  ಪ್ರಶಂಶೆ  ವ್ಯಕ್ತಪಡಿಸಿದರು.

ಮುಂದೆ  ದಕ್ಷಿಣ  ಕನ್ನಡ  ಜಿಲ್ಲೆಯಲ್ಲಿರುವ ಎಲ್ಲಾ ವೈದ್ಯಕೀಯ  ಸಂಸ್ಥೆಗಳನ್ನು  ಒಂದುಗೂಡಿಸುವ  ಪ್ರಯತ್ನ ಮಾಡಬೇಕೆಂದು  ಈ ಕ್ಷಣ  ಅವರು  ಹೇಳಿದರು. ಫ್ಯೂಜಿ ಫಿಲ್ಮ್ ಇಂಡಿಯಾ  ರಾಷ್ಟ್ರೀಯ ಮುಖ್ಯಸ್ಥ ನಾಗರಾಜ ಕೆಂಪಯ್ಯ ಮಾತನಾಡಿ  ,  ಸ್ಪ್ಲೆಸ್  ಫುಜಿಫಿಲ್ಮ್ ಜಪಾನ್‌ನ ಅತ್ಯಾಧುನಿಕ ೧೨೮   ಸಿನೇರಿಯಾ ವ್ಯೂ ಕಾರ್ಡಿಯಾಕ್ ಸಿಟಿ  ಸ್ಕ್ಯಾನರ್, ಅಧುನಿಕ ಡಯಾಗ್ನೋಸ್ಟಿಕ್ ವಿಭಾಗ ಮತ್ತು ಇಂಟರ್‌ವೆನ್ಶನ್ ರೇಡಿಯಾಲಜಿ ವಿಭಾಗ ಮತ್ತು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯವು  ಉತ್ತಮ  ಆರೋಗ್ಯವನ್ನು  ನೀಡಲಿದೆ.

ಈ ನೂತನ ಸೇವೆಗಳು ರೋಗನಿರ್ಣಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಫುಜಿಫಿಲ್ಮ್ ಸಿನೇರಿಯಾ ಜಪಾನಿನ ತಂತ್ರಜ್ಞಾನ ಮತ್ತು ನಿಖರತೆಯ ಸಂಕೇತವಾಗಿದ್ದು, ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ವೈದ್ಯರು ಮತ್ತು ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ ಎಂದರು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಎಸ್‌ಸಿಎಸ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ  ಡಾ. ಜೀವರಾಜ್ ಸೋರಕೆ ವಹಿಸಿಕೊಂಡರು .  ಈ ಸಂದರ್ಭದಲ್ಲಿ  ಸೀನಿಯರ್ ಕನ್ಸಲ್ಟೆಂಟ್ ನ್ಯೂರಾಜಲಿ ಡಾ| ಐ ಜಿ. ಭಟ್  ,  ಎಸ್‌ಸಿಎಸ್  ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ಚಂದ್ರಶೇಖರ್ ಜೆ. ಸೋರಕೆ,  ಹಿರಿಯ  ಶಸ್ತ್ರ  ಚಿಕಿಸ್ತಾ  ತಜ್ಞರಾದ   ಡಾ. ಕೆ. ಭಾಸ್ಕರ್ ಶೆಟ್ಟಿ  ಉಪಸ್ಥಿತರಿದ್ದರು  ಎಸ್ ಸಿಎಸ್ ಆಸ್ಪತ್ರೆಯ ತುರ್ತು ವೈದ್ಯಾಧಿಕಾರಿ  ಡಾ| ಮಲ್ಲಿಕಾರ್ಜುನ್ ಸ್ವಾಗತಿಸಿದರು , ಡಾ ಇವಿಎನ್ ಮಾಬೆನ್ ಪ್ರಸ್ತಾವನ  ನುಡಿಯನ್ನು  ನುಡಿದರು.  ದಿವ್ಯರಾಜ್  ಧನ್ಯವಾದ  ಸಮರ್ಪಿಸಿದರು.