ಮಂಗಳೂರು: ಸೆ.22ರಿಂದ ಜಾತಿಗಣತಿ ನಡೆಯಲಿದ್ದು, ಎಲ್ಲಾ ಮನೆಯವರು ಇದಕ್ಕೆ ಸೂಕ್ತ ಸ್ಪಂದನೆ ನೀಡಬೇಕು. ಸ್ವಯಂಪ್ರೇರಿತರಾಗಿ ಮನೆಯವರು, ಸಂಘ ಸಂಸ್ಥೆ ಸಮಾಜ ಸಂಘಟನೆಯವರು ಸಹಕಾರ ಅಗತ್ಯವಾಗಿ ನೀಡಬೇಕು.
ಇದು ಪ್ರತೀ ಮನೆಯವರಿಗೆ ಅಗತ್ಯವಾಗಿ ಬೇಕಾಗಿದೆ. ಗಣತಿದಾರರು ಮನೆಗೆ ಬರುವಾಗ ಎಲ್ಲಾ ಮಾಹಿತಿಯನ್ನು ಅವರಿಗೆ ನೀಡಿ ಸಹಕರಿಸಬೇಕು. ಗಣತಿ ವೇಳೆ ಕೇಳಲಾಗುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು ಎಂಬ ಮಾಹಿತಿಗಾಗಿ ಆಶಾ ಕಾರ್ಯಕರ್ತರಿಂದ ಫಾರಂ ಅನ್ನು ಮುಂಚಿತವಾಗಿ ಪಡೆದು ಸಿದ್ದರಿರಬೇಕು.
ಆಧಾರ್ ಮೊಬೈಲ್ ಲಿಂಕ್ ಆಗಿರುವ ಬಗ್ಗೆಯೂ ಗಮನಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳು, ಸಮಾಜ ಸಂಘಟನೆಯವರಿಗೆ ಅರಿವು ನೀಡಲು ಸೆ.17ರಂದು ಮಂಗಳೂರಿನಲ್ಲಿ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

