ಮಂಗಳೂರು : ಪಾರ್ಲಿಮೆಂಟ್ ನಲ್ಲಿ ನಿಷೇಧಿತ ಪಿಎಫ್ ಐ ಸಂಘಟನೆ ಹಾಗು ಎಸ್ ಡಿ ಪಿ ಐ ಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಲಿಂಕ್ ಕಲ್ಪಿಸಿದ್ದಾರೆ. ಲೋಕಸಭೆಯಲ್ಲಿ ಚೌಟ ನೀಡಿದ ಹೇಳಿಕೆ ವಿರುದ್ಧ ದ.ಕ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಕಿಡಿಕಾರಿದ್ದಾರೆ.
ಎಸ್ ಡಿ ಪಿ ಐ ಹೆಸರು ಉಲ್ಲೇಖಿಸಿ ನಿಷೇಧಿತ ಸಂಘಟನೆಯೊಂದಿಗೆ ಸಂಬಂಧ ಕಲ್ಪಿಸಿದ್ದಾರೆ. ಪಿ ಎಫ್ ಐ ಕೆಲಸವನ್ನ ಎಸ್ ಡಿಪಿಐ ಮಾಡುತ್ತಿದೆ ಅನ್ನೋ ರೀತಿಯಲ್ಲಿ ಆರೋಪ ಮಾಡಿದ್ದಾರೆ. ಒಬ್ಬ ಸಂಸದ ಯಾವ ರೀತಿ ಮಾತನಾಡಬೇಕು ಅನ್ನೋ ಜ್ಞಾನವಿಲ್ಲದ ರೀತಿ ಮಾತನಾಡಿದ್ದಾರೆ. ಎಸ್ ಡಿ ಪಿ ಐ 2009 ರಿಂದ ಪ್ರಜಾಪ್ರಭುತ್ವದ ಆಶಯದ ಅಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮ್ಮದು ಮೂರನೇ ಅತಿ ದೊಡ್ಡ ರಾಜಕೀಯ ಪಕ್ಷ. ಬಿಜೆಪಿ ಕಾರ್ಯಕರ್ತರೇ ಬ್ರಿಜೇಶ್ ಚೌಟ ವಿರುದ್ಧ ಭ್ರಮನಿರಾಸನಗೊಂಡಿದ್ದಾರೆ. ನಾನು ಜೀವಂತವಾಗಿ ಇದ್ದೇನೆ ಅನ್ನೋದನ್ನ ತೋರಿಸಲು ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಚುನಾವಣೆಗೆ ಸ್ಪರ್ಧೆ ಮಾಡಿ ಹೋದ ನಂತರ ಇವರ ಕೊಡುಗೆ ಏನು?. ಎಸ್ ಡಿಪಿಐ ನ್ನ ಸೈದಾಂತಿಕಾ ಎದುರಿಸಲು ಸಾಧ್ಯವಾಗುತ್ತಿಲ್ಲ. ಇವರಿಗೆ ಯಾರಾದಾದರೂ ರಕ್ತ ಬೇಕು. ಇವರು ಪಾರ್ಲಿಮೆಂಟ್ ನಲ್ಲಿ ಮಾತಾಡಿ ಹೊರಗೆ ಬರುವಾಗ ಒಳಗೆ ಚಿಕ್ಕಮಗಳೂರಿನ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಇದೆ ರೀತಿ ಮಾತನಾಡಿದ್ರೆ ಜನತೆ ನಿಮ್ಮನ್ನ ಅರಬ್ಬೀ ಸಮುದ್ರಕ್ಕೆ ಬಿಸಾಕುತ್ತಾರೆ. ಎನ್ ಐ ಎ ನಮ್ಮ ನಾಯಕರನ್ನ ಸುಳ್ಳು ಆರೋಪಗಳ ಆಧಾರದಲ್ಲಿ ಬಂಧಿಸಿದ್ದಾರೆ ಎಂದರು.

